CinemaEntertainment
ಬಾಲಿವುಡ್‌ನ ‘ರಾಮಾಯಣ’ ಚಿತ್ರತಂಡ ಸೇರಿದ ಯಶ್. ಆದರೆ ‘ರಾವಣ’ನಾಗಿ ಅಲ್ಲ.
ಮುಂಬೈ: ನಿತೇಶ್ ತಿವಾರಿ ಅವರ ಬಹು ನಿರೀಕ್ಷಿತ ಚಿತ್ರ ‘ರಾಮಾಯಣ’ಕ್ಕೆ ಯಶ್ ಅವರು ದಶಕಂಠ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬಂದಿತ್ತು. ಈಗ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಇದೀಗ ಬಂದ ಸುದ್ದಿಯ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರು ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಎಲ್ಲರೂ ಊಹಿಸಿದಂತೆ ರಾವಣನಾಗಿ ಅಲ್ಲ. ಯಶ್ ಅವರು ಈ ಚಿತ್ರಕ್ಕೆ ಕೇವಲ ಸಹ-ನಿರ್ಮಾಪಕರಾಗಿ ತಂಡದ ಸ್ಪೂರ್ತಿ ಹೆಚ್ಚಿಸಲಿದ್ದಾರೆ.
ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ, ಕುಂಭಕರ್ಣನ ಪಾತ್ರದಲ್ಲಿ ಬಾಬಿ ಡಿಯೋಲ್, ವಿಭೀಷಣನಾಗಿ ವಿಜಯ್ ಸೇತುಪತಿ, ಕೈಕೇಯಿಯಾಗಿ ಲಾರಾ ದತ್ತ ಕಾಣಿಸಿಕೊಳ್ಳಲಿದ್ದಾರೆ ಎಂಬ ಹೇಳಲಾಗಿದೆ. ಈ ಚಿತ್ರವು 2025ರ ದೀಪಾವಳಿಗೆ ಸಿನಿಮಾ ಮಂದಿರಕ್ಕೆ ಲಗ್ಗೆ ಇಡಲಿದೆ ಎಂದು ಅಂದಾಜಿಸಲಾಗಿದೆ.