CinemaEntertainment
ಇಂದು ವರನಟ ರಾಜ್ ಅವರ ಪುಣ್ಯತಿಥಿ.

ಬೆಂಗಳೂರು: ಕನ್ನಡ ಚಿತ್ರರಂಗದ ದಂತಕಥೆ, ವರನಟ, ನಟಸಾರ್ವಭೌಮ, ಕನ್ನಡ ಕಂಠೀರವ, ರಸಿಕರ ರಾಜ, ಗಾನಗಂಧರ್ವ, ಡಾ. ರಾಜಕುಮಾರ್ ಅವರು ಇಂದು ನಮ್ಮನ್ನು ಅಗಲಿ 18 ವರ್ಷಗಳು ಸಂದಿವೆ.
ದಿನಾಂಕ, 12.04.2006ರಂದು ಡಾ. ರಾಜಕುಮಾರ್ ಅವರು, ಕೋಟ್ಯಾಂತರ ಅಭಿಮಾನಿಗಳನ್ನು ಹಾಗೂ ತಮ್ಮ ತುಂಬು ಕುಟುಂಬವನ್ನು ಅಗಲಿದ್ದರು.
ಡಾ. ರಾಜಕುಮಾರ್ ಅವರು 1992ರಲ್ಲಿ ಗೌರವ ಡಾಕ್ಟರೇಟ್ ಪದವಿ, 1983ರಲ್ಲಿ ಪದ್ಮಭೂಷಣ, 1992ರಲ್ಲಿ ಕರ್ನಾಟಕ ರತ್ನ, 1995ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 1999ರಲ್ಲಿ ನಾಡೋಜ ಪ್ರಶಸ್ತಿ, 2002ರಲ್ಲಿ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.