Technology
ಗೋಪಿ ತೋಟಕೂರ: ಭಾರತದ ಮೊದಲ ಅಂತರಿಕ್ಷ ಪ್ರವಾಸಿ.
ವಾಷಿಂಗ್ಟನ್: ಜಾಗತಿಕ ದೈತ್ಯ ಕಂಪನಿ ಅಮೆಜಾನ್‌ನ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೆಜೋಸ್ ತಮ್ಮ ಅಂತರಿಕ್ಷ ಪ್ರವಾಸದ ಉಪಕ್ರಮವಾದ ‘ಬ್ಲೂ ಒರಿಜಿನ್’ನ, ಅಂತರಿಕ್ಷ ಪ್ರವಾಸಿ ನೌಕೆ ‘ಎನ್ಎಸ್25’ನ ಮುಂದಿನ ಪ್ರವಾಸಿಗರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪ್ರವಾಸಕ್ಕೆ 6 ಜನರ ಹೆಸರನ್ನು ಆಯ್ಕೆ ಮಾಡಲಾಗಿದೆ. ಈ ಹೆಸರುಗಳಲ್ಲಿ ‘ಗೋಪಿ ತೋಟಕೂರ’ ಅವರದು ಕೂಡ ಒಂದಾಗಿದೆ. 1984ರಲ್ಲಿ ಭಾರತದ ವಾಯುಪಡೆಯ ವಿಂಗ್ ಕಮಾಂಡರ್ ಆಗಿದ್ದ ರಾಕೇಶ್ ಶರ್ಮಾ ಅವರು ಮೊಟ್ಟ ಮೊದಲು ಗಗನಯಾನ ಮಾಡಿದ ಭಾರತೀಯ ಎಂದಾಗಿದ್ದರು. ಹಾಗೆಯೇ, ತೋಟಕೂರ ಅವರು ಗಗನಯಾನ ಮಾಡುತ್ತಿರುವ ಎರಡನೇ ಭಾರತೀಯ ಹಾಗೂ ಅಂತರಿಕ್ಷ ಪ್ರವಾಸ ಮಾಡುತ್ತಿರುವ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಗೋಪಿ ಅವರು ಪೈಲೆಟ್ ಹಾಗೂ ಏವಿಯೇಟರ್ ಆಗಿ ತರಬೇತಿ ಪಡೆದಿದ್ದಾರೆ. ಇವರು ಜಾರ್ಜಿಯಾ ಮೂಲದ ಪ್ರಿಸರ್ವ್ ಲೈಫ್ ಕಾರ್ಪೊರೇಷನ್‌ನ ಸಹ ಸಂಸ್ಥಾಪಕರಾಗಿದ್ದಾರೆ. ಇವರು ಮೂಲತಃ ಆಂಧ್ರಪ್ರದೇಶದ ವಿಜಯವಾಡದವರು.