Sports

ಹೊಸ ಅಧ್ಯಾಯದ ಅಂತ್ಯ?!

ಮುಂಬೈ: ನಿನ್ನೆ ಏಪ್ರಿಲ್ 12ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಅನುಭವಿಸಿದೆ. ಆರ್‌ಸಿಬಿ‌ ತನ್ನ ಸತತ ಸೋಲುಗಳಿಂದ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ.

20 ಓವರ್ ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 196 ರನ್ನುಗಳನ್ನು ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಸಂಪೂರ್ಣ ವಿಫಲ ಕಂಡಿದೆ. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ, ಕೇವಲ 15.3 ಓವರ್ ಗಳಲ್ಲಿ 3 ವಿಕೆಟುಗಳ ನಷ್ಟಕ್ಕೆ ತಮ್ಮ ಗೆಲುವನ್ನು ಸಾಧಿಸಿದೆ.

ಹೊಸ ಅಧ್ಯಾಯದ ಭರವಸೆ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸತತ ನಾಲ್ಕು ಹಿನಾಯ ಸೋಲುಗಳಿಂದ, ಅಭಿಮಾನಿಗಳ ನಂಬಿಕೆ ಕಳೆದುಕೊಂಡಿದ್ದಾರೆ. ಈ ಐಪಿಎಲ್ ಆವೃತ್ತಿಯಲ್ಲಿ ಬೆಂಗಳೂರು ತಂಡ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ.

Show More

Leave a Reply

Your email address will not be published. Required fields are marked *

Related Articles

Back to top button