Bengaluru
ಕನ್ನಡದ ಕವಯಿತ್ರಿಗೆ ಅಂತಾರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ

ಬೆಂಗಳೂರು: ವಿಶ್ವ ಬರಹಗಾರರ ಸಂಸ್ಥೆಯು ಕನ್ನಡದ ಕವಯತ್ರಿ ಮಮತಾ ಜಿ. ಸಾಗರ ಅವರಿಗೆ ಅಂತಾರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇವರ ಪ್ರಥಮ ಸಂಕಲನ ‘ಕಾಡ ನವಿಲಿನ ಹೆಜ್ಜೆ’ 1992ರಲ್ಲಿ ಬಿಡುಗಡೆಗೊಂಡಿತು. ‘ನದಿಯ ನೀರಿನ ತೇವ’ 1999ರಲ್ಲಿ ಹೊರಬಂತು.