ಭಾರತದ ಖ್ಯಾತ ಯೂಟ್ಯೂಬ್ ಗೇಮರ್‌ಗಳನ್ನು ಭೇಟಿ ಮಾಡಿದ ಮೋದಿಜಿ.

ನವದೆಹಲಿ: ಲೋಕಸಭಾ ಚುನಾವಣೆಯ ಹುರುಪಿನ ಪ್ರಚಾರದ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು, ಯೂಟ್ಯೂಬ್ ನಲ್ಲಿ ಹೆಸರು ಮಾಡಿದಂತಹ ಟಾಪ್ ಗೇಮರ್ ಗಳನ್ನು ಭೇಟಿ ಮಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಚಿಕ್ಕ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ನಮೋ,ಭಾರತದ ಗೇಮಿಂಗ್ ಇಂಡಸ್ಟ್ರಿಯಲ್ಲಿ ‘ಹೊಸ ಅಭಿವೃದ್ಧಿಗಳು’ ಏನಾಗಿವೆ ಎಂಬುದರ ಕುರಿತು ಚರ್ಚಿಸಿದ್ದಾರೆ.
ತೀರ್ಥ ಮೆಹ್ತಾ, ಪಾಯಲ್ ಧಾರೆ, ಅನಿಮೇಶ್ ಅಗರ್ವಾಲ್, ಅಂಶು ಬಿಷ್ಟ್, ನಮನ್ ಮಾಥುರ್, ಮಿಥಿಲೇಶ್ ಪಾಟಂಕರ್, ಗಣೇಶ್ ಗಂಗಾಧರ್‌ರಂತಹ ಪಿಸಿ ಗೇಮರ್ ಹಾಗೂ ವಿಆರ್ ಗೇಮರ್ ಗಳನ್ನು ಮೋದಿಜಿ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಗ್ಯಾಂಬಲಿಂಗ್ ವಿರುದ್ಧ ಗೇಮಿಂಗ್ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಹಾಗೆಯೇ ಗೇಮಿಂಗ್ ಇಂಡಸ್ಟ್ರಿಯಲ್ಲಿ ಮಹಿಳೆಯರ ಪಾಲನ್ನು ಕೂಡ ಚರ್ಚಿಸಲಾಯಿತು. ಭಾರತದಲ್ಲಿ 450 ಮಿಲಿಯನ್ ಆನ್‌ಲೈನ್ ಗೇಮರುಗಳಲ್ಲಿ, 100 ಮಿಲಿಯನ್ ಜನರು ಪ್ರತಿದಿನ ಆಟಗಳನ್ನು ಆಡುತ್ತಾರೆ. ಅಂದಾಜು 90 ಮಿಲಿಯನ್ ಆಟಗಾರರು ಆಟಗಳನ್ನು ಆಡಲು ಪಾವತಿಸಿದ್ದಾರೆ. ಈ ವಿಭಾಗದ ಆದಾಯದ 83% ಅನ್ನು ನೈಜ ಹಣದ ಆಟಗಳಿಂದ ಸಂಗ್ರಹಿಸಲಾಗಿದೆ.