ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾದಲ್ಲಿ ಇರುವ ಪ್ರಸಿದ್ಧ ರಾಮೇಶ್ವರಂ ಕೆಫೆ ಮೇಲೆ ಕಳೆದ ತಿಂಗಳು ಬಾಂಬ್ ಸ್ಫೋಟವಾಗಿತ್ತು. ಇದು ಮಹಾನಗರ ಸೇರಿದಂತೆ ಇಡೀ ದೇಶದ ನೆಮ್ಮದಿಯನ್ನೇ ಹದಗೆಡಿಸಿತ್ತು.
ಇದರ ತನಿಖೆಯನ್ನು ಬೆನ್ನಟ್ಟಿದ ರಾಷ್ಟ್ರೀಯ ತನಿಕಾ ಸಂಸ್ಥೆಗೆ ಮುಸ್ಸಾವಿರ್ ಹುಸೈನ್ ಶಾಝಿಬ್, ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ ಎಂಬ ಎರಡು ಆರೋಪಿಗಳ ಸುಳಿವು ದೊರಕಿತು. ಈ ಎರಡೂ ಆರೋಪಿಗಳನ್ನು ಹುಡುಕಲು ಸಹಾಯ ಮಾಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಭರವಸೆ ನೀಡಲಾಗಿತ್ತು.
ಅದೇ ರೀತಿ ಇಂದು ಶುಕ್ರವಾರ ಆರೋಪಿಗಳಾದ ಶಾಝಿಬ್ ಹಾಗೂ ತಹಾ ಅವರನ್ನು ಪಶ್ಚಿಮ ಬಂಗಾಳದ ಕೊಲ್ಕತ್ತಾ ಸಮೀಪ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ ಎಂಬ ವರದಿ ಲಭ್ಯವಾಗಿದೆ.