Politics

ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಸಂಭವ.

ವಾಷಿಂಗ್ಟನ್: ಮಧ್ಯಪೂರ್ವ ಏಷ್ಯಾ ಭಾಗದ ರಾಷ್ಟ್ರಗಳಾದ ಇಸ್ರೇಲ್ ಹಾಗೂ ಇರಾನ್‌ಗಳ ನಡುವೆ ಯುದ್ದ ಸಂಭವಿಸುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಡಮಾಸ್ಕಸ್‌ನಲ್ಲಿ ಇರುವ ಇರಾನ್ ರಾಯಭಾರಿ ಕಚೇರಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ನ ಏಳು ಮಂದಿ ಸಿಬ್ಬಂದಿಗಳು ಹಾಗೂ ಎರಡು ಜನ ಸಾರ್ವಜನಿಕರನ್ನು ಸಾಯಿಸಿದ್ದಾರೆ ಎಂದು ಇರಾನ್ ಆರೋಪ ಮಾಡಿತ್ತು. ಇದರ ವಿರುದ್ಧ ನಾವು ಸೇಡು ತೀರಿಸಿಕೊಳ್ಳುತ್ತೇವೆ ಎಂದು ಇರಾನ್ ದೇಶದ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನ ಎಚ್ಚರಿಸಿದ್ದರು.

ಆದರೆ ಏಪ್ರಿಲ್ 1ರಂದು ನಡೆದ ಈ ವೈಮಾನಿಕ ದಾಳಿಯ ಹೊಣೆಯನ್ನು ಇಸ್ರೇಲ್ ತಳ್ಳಿಹಾಕಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಕ್ರಿಯಿಸಿದ ಅಮೇರಿಕಾದ ಅಧ್ಯಕ್ಷ ಜೋ ಬೈಡನ್, ‘ಇಸ್ರೇಲ್‌ನ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಯುದ್ಧದಲ್ಲಿ ಇಸ್ರೇಲ್ ದೇಶವನ್ನು ಬೆಂಬಲಿಸುತ್ತೇವೆ. ಇಸ್ರೇಲ್‌ಗೆ ಬೇಕಾದ ಎಲ್ಲ ಸಹಾಯವನ್ನು ಮಾಡಲಿದ್ದೇವೆ. ಯುದ್ಧ ನಡೆಸಿದರೆ ಇರಾನ್ ಗೆಲುವು ಕಾಣುವುದಿಲ್ಲ.’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭಾರತ ಸೇರಿದಂತೆ ರಷ್ಯಾ, ಫ್ರಾನ್ಸ್, ಪೋಲ್ಯಾಂಡ್, ಜರ್ಮನಿ ಹಾಗೂ ಇತರ ದೇಶಗಳು ಇಸ್ರೇಲ್ ಹಾಗೂ ಇರಾನ್ ದೇಶಗಳಿಗೆ ಪ್ರಯಾಣಿಸದಂತೆ ತಮ್ಮ ಪ್ರಯಾಣಿಕರಿಗೆ ಸಲಹೆ ನೀಡಿದೆ.

Show More

Related Articles

Leave a Reply

Your email address will not be published. Required fields are marked *

Back to top button