IndiaPolitics

ಭಾರತದ ರಾಜಕಾರಣದಲ್ಲಿ ಮೂಗು ತೂರಿಸುತ್ತಿರುವ ಅಮೇರಿಕಾ: ಭಾರತಕ್ಕೂ ಬರಲಿದೆಯೇ ಬಾಂಗ್ಲಾ ಪರಿಸ್ಥಿತಿ..?!

ನವದೆಹಲಿ: ಇತ್ತೀಚೆಗೆ ಭಾರತದಲ್ಲಿ ಅಮೆರಿಕಾದ ಅಸಹಜ ನೀತಿಗಳ ಪರಿಣಾಮಗಳು ದೊಡ್ಡ ಚರ್ಚೆಗೆ ಕಾರಣವಾಗುತ್ತಿವೆ. ಅಮೆರಿಕದ ವಿವಿಧ ಪ್ರಭಾವಿ ವ್ಯಕ್ತಿಗಳು ಭಾರತದ ಆಂತರಿಕ ರಾಜಕೀಯದಲ್ಲಿ ಪ್ರವೇಶಿಸಿವೆ ಎಂಬ ಆರೋಪ ಕೇಳಿಬಂದಿದೆ. ಈ ಬೆಳವಣಿಗೆಯು ಭಾರತದ ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ಹೆಚ್ಚಿಸಿದೆ.

  1. ವಿರೋಧ ಪಕ್ಷಗಳ ನಾಯಕರ‌ ಭೇಟಿ: ಅಮೆರಿಕಾದ ಪ್ರಮುಖ ವ್ಯಕ್ತಿಗಳು, ಬಿಜೆಪಿ ವಿರೋಧಿ “ಕೃಷಿ” ನಾಯಕರು, ಓವೈಸಿ, ಒಮರ್ ಅಬ್ದುಲ್ಲಾ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರೊಂದಿಗೆ ಮುಕ್ತವಾಗಿ ಭೇಟಿಯಾಗುತ್ತಿದ್ದಾರೆ. ಈ ಹಿಂದೆ ನಿಂತು ಇನ್ನೂ ಹಲವು ನಾಯಕರುಗಳೊಂದಿಗೆ ಸಂಧಾನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
  2. ರಾಜಕೀಯ ಮೈತ್ರಿಯ ಪ್ರಯತ್ನಗಳು: ಕೆಲವು ರಾಜಕೀಯ ಪಕ್ಷಗಳನ್ನು ಅಮೆರಿಕಾ ಬಿಜೆಪಿ ಮೈತ್ರಿಯಿಂದ ದೂರವಾಗಲು ಅಥವಾ ರಾಹುಲ್ ಗಾಂಧಿಯೊಂದಿಗೆ ಮೈತ್ರಿ ಮಾಡಲು ಪ್ರೇರೇಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದ್ದಾರೆ.
  3. ಹಠಾತ್ ಪ್ರತಿಭಟನೆಗಳ ಆತಂಕ: ದೇಶದ ಯಾವುದೇ ಭಾಗದಲ್ಲಿ ವಿದ್ಯಾರ್ಥಿಗಳು ಅಥವಾ ಜಾತಿಯ ಹೆಸರಿನಲ್ಲಿ ಹಠಾತ್ ಪ್ರತಿಭಟನೆಗಳು ನಡೆಯಬಹುದೆಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಈ ಹಿಂದಿನ ಶಕ್ತಿಗಳು ಇಂತಹ ಪ್ರತಿಭಟನೆಗಳಿಗೆ ಜನರನ್ನು ಒದಗಿಸಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮಗಳ ಡೇಟಾವನ್ನು ತಪ್ಪು ಬಳಕೆ ಮಾಡಿರುವ ಆರೋಪವನ್ನು ಅಮೇರಿಕಾ ಎದುರಿಸುತ್ತಿದೆ. ಎನ್‌ಕ್ರಿಪ್ಟೆಡ್ ಚಾಟ್‌ಗಳು ಅಥವಾ ವಾಟ್ಸಾಪ್‌ ರೀತಿಯ ಅಪ್ಲಿಕೇಶನ್‌ಗಳಲ್ಲಿ ಡೇಟಾ ವರ್ಗಾವಣೆ ಮಾಡುತ್ತಿರುವವರು ಎಚ್ಚರಿಕೆಯಿಂದಿರಬೇಕು. ಅಮೆರಿಕನ್‌ ಸಂಸ್ಥೆಗಳು ಈ ಸಂದೇಶಗಳನ್ನು ಓದುತ್ತಿವೆ ಎಂಬುದು ಸ್ಪಷ್ಟವಾಗಿದೆ. ಇಲ್ಲದಿದ್ದರೆ ಟೆಲಿಗ್ರಾಂ ಸಂಸ್ಥಾಪಕನು ಸುಖಾಸುಮ್ಮನೆ ಜೈಲು ಸೇರುತ್ತಿರಲಿಲ್ಲ ಎಂಬುದು ತಜ್ಞರ ಅಭಿಪ್ರಾಯ.

Show More

Related Articles

Leave a Reply

Your email address will not be published. Required fields are marked *

Back to top button