
ಬೆಂಗಳೂರು: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಅವರ ಪುಣ್ಯಸ್ಮರಣೆಯ ಅಂಗವಾಗಿ, “ಅನಂತ ಸ್ಮೃತಿ ನಡಿಗೆ” ಎಂಬ ಪಂಜಿನ ಮೆರವಣಿಗೆಗೆ ಬೆಂಗಳೂರು ಸಾಕ್ಷಿಯಾಯಿತು. ಅನಂತಕುಮಾರ್ ಅವರ ಸದಾ ಪ್ರೇರಣೆಯ ಹಾದಿಯನ್ನು ಹತ್ತಿರದಿಂದ ಕಂಡು ಬರುವುದು, ಹಲವರಿಗೆ ಹೊಸ ಸ್ಪೂರ್ತಿಯಾಗಿದೆ. ಈ ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ನೇತೃತ್ವ ವಹಿಸಿ, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಕೃಷ್ಣಭಟ್, ಮಾಜಿ ಸಚಿವ ಅರವಿಂದ್ ಲಿಂಬಾವಳಿ, ಟಿಟಿಡಿ ನೂತನ ಸದಸ್ಯ ಎಸ್. ನರೇಶ್ ಕುಮಾರ್, ಶಾಸಕರಾದ ರವಿ ಸುಬ್ರಮಣ್ಯ, ರಾಮಮೂರ್ತಿ, ಮಾಜಿ ಬಿಬಿಎಂಪಿ ಸದಸ್ಯರಾದ ಸದಾಶಿವ ಮತ್ತು ಸುಬ್ಬಣ್ಣ ಸೇರಿ ಹಲವರು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.
ಸೌತ್ ಎಂಡ್ ವೃತ್ತದಲ್ಲಿರುವ ಅನಂತ ಪ್ರೇರಣ ಕೇಂದ್ರದಿಂದ ಪ್ರಾರಂಭವಾದ ಈ ಪಾದಯಾತ್ರೆಯು ಮೂರು ಕಿಲೋಮೀಟರ್‌ಗಳ ದೂರ ನಡೆದು, ಅನಂತಕುಮಾರ್ ಅವರನ್ನು ಮತ್ತೆ ಜನರಿಗೆ ನೆನಪಿಸಿದರು.