BengaluruPolitics

ಒಂದು ಚುನಾವಣಾ ವಿಶ್ಲೇಷಣೆ:ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಲೆಕ್ಕಾಚಾರಗಳನ್ನು ನೋಡಿದಾಗ ಈ ಬಾರಿ ಕ್ಷೇತ್ರದ ಸಿಟ್ಟಿಂಗ್ MP ಡಿಕೆ ಸುರೇಶ್ ಗೆಲುವು ಅಷ್ಟು ಸುಲಭವಲ್ಲ. ಸಂಖ್ಯಾ ಶಾಸ್ತ್ರ ನೋಡಿದ್ರೆ ಬಿಜೆಪಿ ಮತ್ತು JDS ನ ಒಮ್ಮತದ ಅಭ್ಯರ್ಥಿ
ಡಾ.ಮಂಜುನಾಥ್ ಗೆಲ್ಲಬಹುದು ಅನಿಸ್ತಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನ ಸಭಾ ಕ್ಷೇತ್ರಗಳು ಬರುತ್ತದೆ. 2023ರಲ್ಲಿ ಈ ವಿಧಾನ ಸಭಾ ಕ್ಷೇತ್ರಗಳಲ್ಲಿ ವಿವಿಧ ಪಾರ್ಟಿಗಳು ಪಡೆದ ಮತಗಳನ್ನು ನೋಡಿದಾಗ…

ಕುಣಿಗಲ್ (ಶಾಸಕ: HD ರಂಗನಾಥ್ : ಕಾಂಗ್ರೆಸ್)
ಬಿಜೆಪಿ. 48151
Cong 74276
JDS 46974

ರಾಜರಾಜೇಶ್ವರಿ ನಗರ (ಶಾಸಕ ಮುನಿರತ್ನ: ಬಿಜೆಪಿ)
ಬಿಜೆಪಿ 127980
Cong 116138
JDS 7795

ಬೆಂಗಳೂರು ದಕ್ಷಿಣ ( ಶಾಸಕ: ಕೃಷ್ಣಪ್ಪ: ಬಿಜೆಪಿ)
ಬಿಜೆಪಿ 196220
Cong 146521
JDS 24612

ಆನೇಕಲ್ (ಶಾಸಕ :ಶಿವಣ್ಣ:cong)
ಬಿಜೆಪಿ 103472
Cong 134797
JDS 6415

ಮಾಗಡಿ( ಶಾಸಕ HC ಬಾಲಕೃಷ್ಣ: ಕಾಂಗ್ರೇಸ್)
ಬಿಜೆಪಿ 20197
Cong 94650
JDS 82811

ರಾಮನಗರ (ಶಾಸಕ ಇಕ್ಬಾಲ್ ಹುಸೇನ್: ಕಾಂಗ್ರೇಸ್)
ಬಿಜೆಪಿ 12912
Cong 87690
JDS 76975

ಕನಕಪುರ (ಶಾಸಕ ಡಿಕೆ ಶಿವಕುಮಾರ್: ಕಾಂಗ್ರೇಸ್)
ಬಿಜೆಪಿ 19602
Cong 143023
JDS 20631

ಚೆನ್ನಪಟ್ಟಣ (ಶಾಸಕ HD ಕುಮಾರ ಸ್ವಾಮಿ: JDS)
ಬಿಜೆಪಿ 80677
Cong 15374
JDS 96592

ಎಲ್ಲಾ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಪಕ್ಷಗಳು ಪಡೆದ ಮತಗಳು

ಬಿಜೆಪಿ 6,09,211
Cong 7,38,193
JDS 3,62,805

ಪ್ರಸ್ತುತ ಬಿಜೆಪಿ ಮತ್ತು ಜೆಡಿಯಸ್ ಮೈತ್ರಿ ಇರುವುದರಿಂದ
BJP+ JDS =9,72,016

ಕಾಂಗ್ರೇಸ್ ಅಲ್ಲಿ ಎಕಾಂಗಿಯಾಗಿ ಸ್ಪರ್ಧೆ ಮಾಡ್ತಾ ಇದೆ. ಹಾಗಾಗಿ ಕಾಂಗ್ರೆಸ್ ಪಡೆದ ಒಟ್ಟು ಮತಗಳು 7,38,193 ಅಂದರೆ NDA ಗೆ 2,33, 823 ಲೀಡ್ ಇದೆ. ಲೋಕಸಭೆಯಲ್ಲೂ ಇದೆ ಟ್ರೆಂಡ್ ಇದ್ದರೆ ಮೇಲ್ನೋಟಕ್ಕೆ ಡಾ. ಮಂಜುನಾಥ್ ಗೆಲುವು ಸುಲಭ. 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಮೈತ್ರಿ 6 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕ್ಷೇತ್ರ ಸೇರಿ ಎರಡು ಕ್ಷೇತ್ರದಲ್ಲಿ ಕಾಂಗ್ರೇಸ್ ಮುನ್ನಡೆಯಲ್ಲಿದೆ.

ಆದರೆ ಲೋಕಸಭಾ ಚುನಾವಣೆ ಟ್ರೆಂಡ್, ಜನ ಮತ ಹಾಕುವ ಮಾನದಂಡ, ವಿಚಾರ ಎಲ್ಲವೂ ಬೇರೆ ಬೇರೆಯೇ ಆಗಿರುತ್ತದೆ. ಪ್ರಸ್ತುತ ಸಂಸದರಾಗಿರುವ ಡಿಕೆ ಸುರೇಶ್ ವಿರುದ್ಧ ಜನ ವಿರೋಧಿ ಅಲೆಯೂ ಅಲ್ಲಿದೆ. ಜೊತೆಗೆ ಬಿಜೆಪಿ ಒಬ್ಬ ಸ್ವಚ್ಛ ವ್ಯಕ್ತಿತ್ವದ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಬಿಜೆಪಿ ಕಾರ್ಯಕರ್ತರು ಅವರು ಗೆದ್ದರೆ ಕೇಂದ್ರದಲ್ಲಿ ಹೆಲ್ತ್ ಮಿನಿಸ್ಟರ್ ಆಗುತ್ತಾರೆ ಅಂತ ಈಗಲೇ ಪ್ರೊಜೆಕ್ಟ್ ಮಾಡೋಕೆ ಶುರು ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಸುರೇಶ್ ಗೆಲುವು ಅಷ್ಟು ಸುಲಭವಲ್ಲ!! ಮೇಲ್ನೋಟಕ್ಕೆ NDA ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿದೆ.

(ಮೇಲಿನ ಮತಗಳ ಮಾಹಿತಿ ಚುನಾವಣಾ ಆಯೋಗದ ವೆಬ್ ಸೈಟಿನಿಂದ ಪಡೆದುಕೊಂಡದ್ದು)

Show More

Leave a Reply

Your email address will not be published. Required fields are marked *

Related Articles

Back to top button