ಅಣ್ಣಾಮಲೈ ಸೋಲು! ಬಿಜೆಪಿಯ ದಳಪತಿಯ ಮುಂದಿನ ಭವಿಷ್ಯವೇನು?
ಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ಎಡವಿದ ಭಾರತೀಯ ಜನತಾ ಪಕ್ಷ. ಡಿಎಂಕೆಯ ರಾಜ್‌ಕುಮಾರ್ ವಿರುದ್ಧ ಸೋತ ಬಿಜೆಪಿ ದಳಪತಿ ಅಣ್ಣಾಮಲೈ.
ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಆದರೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನ ಗಣಪತಿ ರಾಜ್‌ಕುಮಾರ್ ವಿರುದ್ಧ 114,000 ಮತಗಳ ಅಂತರದಿಂದ ಸೋತರು. ಭಾರತದ ಚುನಾವಣಾ ಆಯೋಗದ (ಇಸಿಐ) ಇತ್ತೀಚಿನ ಅಂಕಿಅಂಶಗಳ ಪ್ರಕಾರ, ರಾಜ್‌ಕುಮಾರ್ 5,53,470 ಮತಗಳನ್ನು ಪಡೆದರೆ, ಅಣ್ಣಾಮಲೈ 4,39,168 ಮತಗಳನ್ನು ಗಳಿಸಿದರು. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಜಗಂ (ಎಐಎಡಿಎಂಕೆ)ಯ ಸಿಂಗೈ ರಾಮಚಂದ್ರನ್ 2,20,000 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.
ಎಐಎಡಿಎಂಕೆಯ ಭದ್ರಕೋಟೆ ಎಂದು ಪರಿಗಣಿಸಲಾದ ಕೊಯಮತ್ತೂರು, ದ್ರಾವಿಡ ಪಕ್ಷಗಳು ಮತ್ತು ಬಿಜೆಪಿ ನಡುವಿನ ತೀವ್ರ ಚುನಾವಣಾ ಹೋರಾಟಕ್ಕೆ ಸಾಕ್ಷಿಯಾಗಿದೆ. ಬಿಜೆಪಿಯ ಹೈಕಮಾಂಡ್ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದ್ದರು. ಅಣ್ಣಾಮಲೈಯವರು ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ಸೋಲನ್ನು ಅನುಭವಿಸಿದ್ದರು. ಅದೇ ರೀತಿಯಾಗಿ ಲೋಕಸಭಾ ಚುನಾವಣೆಯಲ್ಲಿ ಕೂಡ ಸೋಲನ್ನು ಕಂಡಿದ್ದಾರೆ. ಇವುಗಳನ್ನು ನೋಡಿದರೆ ಬಿಜೆಪಿಯ ಮುಂದಿನ ದಳಪತಿಯ ಭವಿಷ್ಯ ಏನು ಎಂಬುದರ ಬಗ್ಗೆ ಪ್ರಶ್ನೆ ಉದ್ಭವಿಸುತ್ತದೆ.