ಚೆನ್ನೈ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಆರೋಪ, ಪ್ರತ್ಯಾರೋಪಗಳು ಗರಿಗೆದರಿದೆ. ಒಬ್ಬರ ಮೇಲೆ ಒಬ್ಬರು ಹರಿಹಾಯುವುದನ್ನು ದಿನವೂ ಕಾಣುತ್ತಿದ್ದೇವೆ. ಇತ್ತ ತಮಿಳುನಾಡಿನಲ್ಲಿ ಕೂಡ ಬಿಜೆಪಿ ವಿರುದ್ಧ ಪ್ರಾದೇಶಿಕ ಪಕ್ಷಗಳು ಹಾಗೂ ಎಡಪಂಥೀಯ ಪಕ್ಷಗಳು ಕೊಂಕು ಮಾತುಗಳನ್ನು ಪ್ರಯೋಗಿಸುತ್ತಿದ್ದಾರೆ.
ಎಡಪಂಥೀಯ ಪಕ್ಷಗಳನ್ನು ಬೆಂಬಲಿಸುವ, ಮಕ್ಕಳ್ ನೀಧಿ ಮೈಯಂ ಪಕ್ಷದ ಸ್ಥಾಪಕ, ಕಮಲ್ ಹಾಸನ್ ಅವರು, “ಪ್ರಧಾನಿ ಮೋದಿ ನಾಯಕತ್ವದ ಎನ್‌ಡಿಎ ಪಕ್ಷ ಅಧಿಕಾರಕ್ಕೆ ಬಂದರೆ, ನಾಗ್ಪುರವನ್ನು ಭಾರತದ ನೂತನ ರಾಜಧಾನಿಯನ್ನಾಗಿ ಮಾಡುತ್ತಾರೆ.” ಎಂದು ಹೇಳಿದರು.
ಇವರ ಈ ಹೇಳಿಕೆಯ ವಿರುದ್ದ ಉತ್ತರಿಸಿದ, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ, ಹಾಗೂ ಕೊಯಂಬತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಶ್ರೀ. ಕೆ. ಅಣ್ಣಾಮಲೈ ಅವರು, “ಅಂತಹ ವ್ಯಕ್ತಿಗಳನ್ನು (ಕಮಲ್ ಹಾಸನ್) ಮಾನಸಿಕ ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕು ಮತ್ತು ಅವರ ಮೆದುಳನ್ನು ಪರೀಕ್ಷಿಸಬೇಕು. ಅವರ ಎಡ ಮತ್ತು ಬಲ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೇಯೇ, ಅವರು ಪ್ರಜ್ಞೆ ಹೊಂದಿದ್ದಾರೆಯೇ ಮತ್ತು ಅವರು ತಮ್ಮ ಆಹಾರವನ್ನು ಸರಿಯಾಗಿ ತಿನ್ನುತ್ತಿದ್ದಾರೆಯೇ ಎಂಬುದನ್ನು ಅವರು ಪರಿಶೀಲಿಸಬೇಕು. ಕಮಲ್ ಹಾಸನ್ ಅವರು ಒಂದು ಒಳ್ಳೆಯ ಮನೋವೈದ್ಯರನ್ನು ಕಾಣಬೇಕು.” ಎಂದು ಅಣಕಿಸಿ ಹೇಳಿದ್ದಾರೆ.