BengaluruCinemaEntertainment
ಪೋಲಿಸ್ ಗೌರವಗಳೊಂದಿಗೆ ಪಂಚಭೂತಗಳಲ್ಲಿ ಲೀನವಾದ ಅಪರ್ಣಾ.

ಬೆಂಗಳೂರು: ತಮ್ಮ ಅಚ್ಚ ಕನ್ನಡದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ, ನಿರೂಪಕಿ ಶ್ರೀಮತಿ. ಅಪರ್ಣಾ ಅವರಿಗೆ, ಪೋಲಿಸ್ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಬಂಧಿಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಅಪರ್ಣಾ ಅವರು ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ ಇಂದ ಬಳಲುತ್ತಿದ್ದರು. ನಿನ್ನೆ ದಿನಾಂಕ: 11.07.2024 ರಂದು ತಮ್ಮ ಬನಶಂಕರಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು 1985ರಲ್ಲಿ ತೆರೆಗೆ ಬಂದಿದ್ದ ‘ಮಸಣದ ಹೂವು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 2015ರಿಂದ 2022ರ ತನಕ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ‘ವರಲಕ್ಷ್ಮಿ’ ಆಗಿ ಜನರ ಮನಸ್ಸನ್ನು ಗೆದ್ದಿದ್ದರು.
ಬೆಂಗಳೂರಿನ ಜನರು ದಿನನಿತ್ಯ ಕೇಳುವ ಮೆಟ್ರೋ ಪ್ರಕಟಣೆಯ ಹಿಂದೆ ಇರುವುದು ಅಪರ್ಣಾ ಅವರದೇ ದ್ವನಿ. ಇವರ ಅಗಲಿಕೆಯಿಂದ ಅಚ್ಚ ಕನ್ನಡದ ಶುದ್ಧ ಕಂಠ ಮರೆಯಾದಂತಾಗಿದೆ.