CinemaEntertainment

ನ.22ಕ್ಕೆ ರಿಲೀಸ್ ಆಗುತ್ತಿದೆ ‘ಆರಾಮ್ ಅರವಿಂದ್ ಸ್ವಾಮಿ’: 99 ರೂಪಾಯಿಗೆ ಟಿಕೆಟ್..?!

ಬೆಂಗಳೂರು: ನವೆಂಬರ್ 22ರಂದು ತೆರೆಗೆ ಬರಲಿರುವ ಅನೀಶ್ ತೇಜೇಶ್ವರ್ ನಟನೆಯ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರ ಪ್ರಚಾರ ಕಾರ್ಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಿನಿಮಾ ಪ್ರೀ-ರಿಲೀಸ್ ಈವೆಂಟ್ ಹಮ್ಮಿಕೊಳ್ಳಲಾಗಿದ್ದು, ಬಘೀರ ಖ್ಯಾತಿಯ ಶ್ರೀಮುರಳಿ ವಿಶೇಷ ಅತಿಥಿಯಾಗಿ ಭಾಗವಹಿಸಿದರು.

ಶ್ರೀಮುರಳಿ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿ, “ಸಫಲತೆಯನ್ನು ಸಾಧಿಸಲು ಶ್ರಮ ಮುಖ್ಯ. ನನ್ನ ಬಘೀರ ಯಶಸ್ಸು ಹಾರ್ಡ್ ವರ್ಕ್ ನ ಫಲ. ನೀವು ಭರವಸೆ ಇರಿಸಿಕೊಳ್ಳಿ. ಈ ಚಿತ್ರತಂಡಕ್ಕೆ ನನ್ನ ಶುಭಾಶಯಗಳು,” ಎಂದರು.

12ನೇ ಸಿನಿಮಾ – ಪ್ರತ್ಯೇಕ ಕಥೆ:
ನಟ ಅನೀಶ್ ತೇಜೇಶ್ವರ್ ಈ ಚಿತ್ರಕ್ಕೆ ತಮ್ಮ 12ನೇ ಸಿನಿಮಾ ಎಂದು ತಿಳಿಸಿದ್ದಾರೆ. “ನಾನು 14 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದೇನೆ. ಈ ಪ್ರಯಾಣದಲ್ಲಿ ತಾಳ್ಮೆ ಮುಖ್ಯ. ಚಿತ್ರತಂಡದ ಬೆಂಬಲ ನನಗಿದೆ,” ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ:
ನಿರ್ದೇಶಕ ಅಭಿಷೇಕ್ ಶೆಟ್ಟಿ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರಕ್ಕೆ ಆಕ್ಷನ್ ಕಟ್ ನೀಡಿದ್ದು, ರೊಮ್ಯಾಂಟಿಕ್ ಕಾಮಿಡಿ ಪಾತ್ರದಲ್ಲಿ ಅನೀಶ್ ತೇಜೇಶ್ವರ್ ಭಿನ್ನವಾದ ನಟನೆಯನ್ನು ತೋರಿಸಿದ್ದಾರೆ. ಮಿಲನಾ ನಾಗರಾಜ್ ಮತ್ತು ಹೃತಿಕ ಶ್ರೀನಿವಾಸ್ ನಾಯಕಿಯರಾಗಿ ನಟಿಸಿದ್ದಾರೆ.

99 ರೂ. ಟಿಕೆಟ್ ಆಫರ್:
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವೈವಿಬಿ ಶಿವಸಾಗರ್ ಕ್ಯಾಮೆರಾವರ್ಕ್ ನಡೆಸಿದ್ದಾರೆ. ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲು ಪ್ರಾರಂಭಿಕ ಮೂರು ದಿನಗಳಲ್ಲಿ ಟಿಕೆಟ್ ಬೆಲೆಯನ್ನು ಕೇವಲ 99 ರೂ.ಗೆ ನಿಗದಿಪಡಿಸಲಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button