Horoscope

2025ರ ಮೇಷ ರಾಶಿ ವೃತ್ತಿ ಭವಿಷ್ಯ: ಯಶಸ್ಸು ಪಡೆಯಲು ನಿಮ್ಮ ಮುಂದಿರುವ ಅವಕಾಶಗಳು ಮತ್ತು ಸವಾಲುಗಳು ಯಾವುವು..?!

ಬೆಂಗಳೂರು: 2025ರಲ್ಲಿ ಮೇಷ ರಾಶಿಯವರ ವೃತ್ತಿ ಬದುಕು ಹೊಸ ಅವಕಾಶಗಳಿಂದ ಕೂಡಿದ್ದು, ಕೆಲವು ಸವಾಲುಗಳನ್ನೂ ಎದುರಿಸಲಿದೆ. ಬಿಸಿನೆಸ್ ಮಾಡಿದವರಿಗೂ ಉದ್ಯೋಗದಲ್ಲಿರುವವರಿಗೂ ಇದು ಉತ್ತಮ ಸಮಯವಾಗಲಿದೆ. ವರ್ಷದ ಆರಂಭದಲ್ಲಿ ನಿಮ್ಮ ಕನಸಿನ ಉದ್ಯೋಗ ಅಥವಾ ಬಯಸಿದ ಸ್ಥಾನದಲ್ಲಿ ಪ್ರೋತ್ಸಾಹದ ಅವಕಾಶಗಳಿವೆ.

ಏಪ್ರಿಲ್ ನಂತರದ ಸಮಯ: ಹೊಸ ವೃತ್ತಿ ಅವಕಾಶಗಳು

ಏಪ್ರಿಲ್ 14 ನಂತರ ಬಿಸಿನೆಸ್ ವ್ಯಾಪಾರಿಗಳಿಗೆ ಯಶಸ್ವಿ ತಿರುವು ಸಿಗುವ ಸಾಧ್ಯತೆಯಿದೆ. ಇಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ಹಂಬಲಿಸುವವರಿಗೆ ಸಂದರ್ಶನದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಆದರೆ, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಉದ್ಯೋಗ ಬದಲಾವಣೆ ಮಾಡುವುದರಿಂದ ದೂರವೇ ಇರಲು ಸಲಹೆ ನೀಡಲಾಗಿದೆ.

ವ್ಯಾಪಾರಿಗಳ ಭವಿಷ್ಯ: ಚಿಂತೆಯ ನಡುವೆ ಶ್ರೇಯಸ್ಸು

ಗುರು ನಿಮ್ಮ ಎರಡನೇ ಮನೆಯಲ್ಲಿ ಫೆಬ್ರವರಿ 4ರವರೆಗೆ ಇರುವುದರಿಂದ, ಉದ್ಯಮದಲ್ಲಿ ಸ್ಥಿರತೆಯ ಅಭಾವ, ಒಪ್ಪಂದಗಳ ಮೇಲೆ ಅನುಮಾನಗಳು ಇತ್ಯಾದಿ ಸಮಸ್ಯೆಗಳಿರುವ ಸಾಧ್ಯತೆಗಳಿವೆ. ಮಾರ್ಚ್ 29ರಿಂದ ಏಪ್ರಿಲ್ 14ರವರೆಗೆ ಶುಕ್ರನ ಸ್ಥಾನ ಪಲ್ಲಟಗಳಿಂದ ವ್ಯಾಪಾರದಲ್ಲಿ ಪ್ರಗತಿ ಕಂಡುಬರುವ ಸಾಧ್ಯತೆಯಿದೆ, ಇದರಿಂದ ಒಳ್ಳೆಯ ದಿನಗಳ ಆರಂಭವಾಗಬಹುದು.

ಉದ್ಯೋಗಸ್ಥರ ಭವಿಷ್ಯ: ಸತತ ಪರಿಶ್ರಮದಿಂದ ಯಶಸ್ಸು

ಗುರುವಿನ ಪ್ರಭಾವದಿಂದ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಎಡವಬಹುದು ಆದರೆ, ಮಾರ್ಚ್ 29ರ ನಂತರದ ದಿನಗಳಲ್ಲಿ ಶನಿ ಗ್ರಹದ ಪ್ರಭಾವವು ಪರಿಶ್ರಮವನ್ನು ಹೆಚ್ಚಿಸಲಿದೆ. ಜುಲೈ-ನವೆಂಬರ್ ನಡುವೆ ಶನಿ ವಕ್ರಗತಿ ಆಗುವುದರಿಂದ ಕೆಲಸದಲ್ಲಿ ಮುನಿಸುಗಳು ಬರುವ ಸಾಧ್ಯತೆಯಿದೆ, ಆದ್ದರಿಂದ ಧೈರ್ಯವನ್ನು ವೃದ್ಧಿ ಪಡಿಸಿಕೊಂಡು ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಇದು ಉತ್ತಮ ಸಮಯವಾಗಿದೆ.

ವೃತ್ತಿಪರರ ಭವಿಷ್ಯ:

ಹೊಸ ಸಂಪರ್ಕಗಳೆಡೆಗೆ ಹೆಜ್ಜೆ ಹಾಕಿ
2025ರ ಆರಂಭದಲ್ಲಿ ಗುರು ಸಂಚಾರವು ನಿಮ್ಮ ಸಂವಹನ ಕೌಶಲ್ಯವನ್ನು ಹೆಚ್ಚಿಸುವ ಕಾರಣ ಹೊಸ ಸಂಪರ್ಕಗಳಾಗಲು ಇದು ಸಹಕಾರಿಯಾಗಬಹುದು. ವರ್ಷದ ಕೊನೆಯ ಭಾಗದಲ್ಲಿ ಯಾವುದೇ ಹೊಸ ಯೋಜನೆಗೆ ನಿರ್ಣಯ ತೆಗೆದುಕೊಳ್ಳುವುದು ಲಾಭದಾಯಕವಾಗದು.

Show More

Leave a Reply

Your email address will not be published. Required fields are marked *

Back to top button