ಶಾಸಕ ಮುನಿರತ್ನ ಅರೆಸ್ಟ್: ಜಾತಿನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪ ನಿಜವೇ..?!
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಲಿತ ಕಾಂಟ್ರಾಕ್ಟರ್ ಚೇಳ್ವರಾಜು ಅವರು ಜಾತಿನಿಂದನೆ ಮಾಡಿರುವ ದೊಡ್ಡ ವಿವಾದಕ್ಕೆ ಕಾರಣವಾಗಿದ್ದಾರೆ. ಮುನಿರತ್ನ ಮತ್ತು ಆತನ ಸಹಚರರು ಕೊಲೆ ಬೆದರಿಕೆ ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಐವರನ್ನು ಆರೋಪಿಸಲಾಗಿದೆ. ಎಫ್ಐಆರ್ ಪ್ರಕಾರ, ಮುನಿರತ್ನ, ಅವರ ಸಹಾಯಕರಾದ ವಿ.ಜಿ ಕುಮಾರ್, ಭದ್ರತಾ ಅಧಿಕಾರಿ ಅಭಿಷೇಕ್ ಮತ್ತು ವಸಂತ್ ಕುಮಾರ್ ಪ್ರಮುಖ ಆರೋಪಿಗಳಾಗಿ ಗುರುತಿಸಲಾಗಿದೆ.
ಚೇಳ್ವರಾಜು ಸುದ್ದಿಗೋಷ್ಠಿಯಲ್ಲಿ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದು, ಮುನಿರತ್ನ ಅವರು ಜಾತಿನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ. ಬಿಜೆಪಿ ಮುನಿರತ್ನನಿಗೆ 5 ದಿನಗಳ ಒಳಗಾಗಿ ತಮ್ಮ ಮೇಲಾದ ಆರೋಪಗಳಿಗೆ ಸ್ಪಷ್ಟನೆ ನೀಡಲು ಶೋ ಕಾಸ್ ನೋಟಿಸ್ ಹೊರಡಿಸಲಾಗಿದೆ.
ಈ ನಡುವೆ ದಲಿತ ಸಂಘರ್ಷ ಸಮಿತಿಯು (DSS) ಮುನಿರತ್ನನಿಗೆ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ಯೋಜನೆ ಹಾಕಿಕೊಂಡಿದೆ. ಮುನಿರತ್ನನ ಮನೆ ಬಳಿ ಪೊಲೀಸರು ಬಿಗಿ ಭದ್ರತೆ ಒದಗಿಸಿ, ಉಳಿದ ರಸ್ತೆಗಳನ್ನು ಮುಚ್ಚಿದ್ದಾರೆ.
ಈ ಆರೋಪಗಳ ಮೇಲೆ ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ್, “ಮುನಿರತ್ನ ದಲಿತ ಸಮುದಾಯವನ್ನು ಅವಹೇಳನ ಮಾಡಿದ್ದಾರೆ, ಅವರನ್ನು ತಕ್ಷಣವೇ ಬಿಜೆಪಿ ಮುಲಾಜು ಇಲ್ಲದೆ ವಜಾ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.