”ಅಯೋಧ್ಯೆಯ ಶ್ರೀರಾಮನ ಮೂರ್ತಿಯ ಮಸ್ತಕದ ಮೇಲೆ ಬೀಳಲಿದೆ ಸೂರ್ಯನ ಕಿರಣ” – ಡಾ. ಸುಧಾಂಶು ತ್ರಿವೇದಿ.
ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡ ಬಾಲರಾಮನ ಮಂದಿರದ ವೈಜ್ಞಾನಿಕ ವಿಶೇಷತೆಯನ್ನು ಹಾಗೂ ಪ್ರಾಚೀನ ಹಿಂದೂಗಳ ವಿಜ್ಞಾನದ ಶಕ್ತಿಯನ್ನು, ಬಿಜೆಪಿಯ ಸಂಸದ ಡಾ. ಸುಧಾಂಶು ತ್ರಿವೇದಿ ಅವರು ಇಂದು ಸಂಸತ್ತಿನಲ್ಲಿ ವಿವರಿಸಿದರು.
“ರಾಮನವಮಿ ದಿನದಂದು ಸೂರ್ಯನ ಕಿರಣ ರಾಮಲಲ್ಲಾನ ಮಸ್ತಕದ ಮೇಲೆ ಬೀಳಲಿದೆ. ಇದಕ್ಕೆ ಬಹಳ ಮುಖ್ಯವಾದದ್ದು ಗ್ರಹಗಳ ಸ್ಥಾನ, ಸೂರ್ಯನ ಸ್ಥಾನದಿಂದ ಭೂಮಿಯ ಕೋನ ಆ ನಿರ್ದಿಷ್ಟ ದಿನದಂದು ಎಷ್ಟಿರುತ್ತದೆ ಎಂಬುದೂ ಮುಖ್ಯ. ಇದರ ಕುರಿತು ಮೂರು ಇನ್ಸ್ಟಿಟ್ಯೂಟ್ ಗಳು ಅಧ್ಯಯನ ಮಾಡಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಬೆಂಗಳೂರು, ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ರೂರ್ಕಿ, ಮತ್ತು ಒಂದು ಖಾಸಗಿ ಕಂಪನಿ ಸೇರಿ ಇದರ ಸಂಪೂರ್ಣ ಅಧ್ಯಯನ ನಡೆಸಿ ಬಾಲರಾಮನ ಮೂರ್ತಿಯ ಹಣೆಯ ಮೇಲೆ ಸೂರ್ಯನ ಕಿರಣವನ್ನು ರಾಮನವಮಿಯಂದು ಸ್ಥಾಪಿಸುವ ಕೆಲಸ ಮಾಡಿದ್ದಾರೆ”. ಎಂದು ಹೇಳಿದರು.
“ಅಷ್ಟೇ ಅಲ್ಲದೆ ನಮ್ಮ ಕೋನಾರ್ಕನ ಸೂರ್ಯನ ದೇವಾಲಯದಲ್ಲಿ ಸಹ ಇಂತಹ ವಿಜ್ಞಾನ ಉಪಯೋಗಿಸಿದ್ದರು, ಆಂಧ್ರಪ್ರದೇಶದ ವೇದನಾರಾಯಣ ದೇವಾಲಯ, ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ, ಹಾಗೂ ಕರ್ನಾಟಕದ ಶೃಂಗೇರಿ ದೇವಾಲಯಗಳಲ್ಲಿ ಕೂಡ ಇಂತಹುದೇ ವೈಜ್ಞಾನಿಕ ವಿಶೇಷತೆಗಳನ್ನು ಕಾಣಬಹುದು. ವಿಜ್ಞಾನದ ಬಗ್ಗೆ ಆಗಿನ ಕಾಲದ ಜನರಲ್ಲಿ ಅರಿವು ಇರದಿದ್ದರೆ ಇಷ್ಟು ನಿಖರವಾದ ಲೆಕ್ಕಾಚಾರ ಮಾಡಲು ಹೇಗೆ ಸಾಧ್ಯ? ಹೀಗಾಗಿ ನಾವು ನಮ್ಮ ಧರ್ಮ ಮತ್ತು ಸಂಸ್ಕೃತಿಯ ಜೊತೆಗೆ ನಮ್ಮ ವಿಜ್ಞಾನದ ಮೇಲೂ ಗರ್ವ ಪಡಬೇಕು “. ಎಂದು ಹೇಳಿದರು.
ನಮ್ಮ ಪ್ರಾಚೀನ ವಿಜ್ಞಾನದ ಕುರಿತು, ಖ್ಯಾತ ಖಗೋಳಶಾಸ್ತ್ರಜ್ಞ ಕಾರ್ಲ್ ಸಾಗನ್ ಅವರು ಹೇಳಿದ ” ಕೇವಲ ಪ್ರಾಚೀನ ಹಿಂದೂಗಳ ಖಗೋಳ ಲೆಕ್ಕಾಚಾರ ಮಾತ್ರ, ಆಧುನಿಕ ಖಗೋಳಶಾಸ್ತ್ರದ ಲೆಕ್ಕಾಚಾರಕ್ಕೆ ತೀರಾ ಹತ್ತಿರವಿದೆ.” ಎಂಬ ಹೇಳಿಕೆಯನ್ನು ಸಹ ಉಲ್ಲೇಖಿಸಿದರು.