Politics
ಅಯೋಧ್ಯಾ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವೀಸಾ ನಿರಾಕರಣೆ ಮಾಡಿದ ಅಮೇರಿಕಾ!
ಬೆಂಗಳೂರು: ಅಯೋಧ್ಯಾ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕಾದ ವೀಸಾ ನಿರಾಕರಣೆ ಆಗಿದ್ದು, ಈ ವಿಷಯವು ಭಾರೀ ಆಘಾತ ತಂದಿದೆ. ಯೋಗಿರಾಜ್ ಅವರು ಎರಡು ತಿಂಗಳ ಹಿಂದೆಯೇ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರೂ, ಆ. 10ರಂದು ವೀಸಾ ನಿರಾಕರಣೆ ಕುರಿತು ಮಾಹಿತಿ ದೊರೆತಿದೆ.
ಅರುಣ್ ಯೋಗಿರಾಜ್ ಅವರು ಅಮೆರಿಕಾದ ಕನ್ನಡ ಸಂಘಗಳ ಒಕ್ಕೂಟದ (Association of Kannada Kootas of America) ಜಾಗತಿಕ ಕನ್ನಡ ಸಮ್ಮೇಳನ 2024ಕ್ಕೆ ಹಾಜರಾಗಲು ವೀಸಾ ಅರ್ಜಿ ಸಲ್ಲಿಸಿದ್ದರು. ಆಶ್ಚರ್ಯ ಎಂದರೆ, ವೀಸಾ ನಿರಾಕರಣೆಗೆ ಅಮೆರಿಕಾ ರಾಯಭಾರ ಕಚೇರಿಯಿಂದ ಯಾವುದೇ ಕಾರಣ ನೀಡಲಾಗಿಲ್ಲ.
ಈ ನಿರಾಕರಣೆ ಯೋಗಿರಾಜ್ ಅವರ ಅಭಿಮಾನಿಗಳಲ್ಲಿ ಹಾಗೂ ಕನ್ನಡಿಗರಲ್ಲಿ ಆಘಾತ ಉಂಟುಮಾಡಿದೆ.