CinemaEntertainment

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಾಲಯ್ಯ!

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ನಂದಮುರಿ ಬಾಲಕೃಷ್ಣ ಅವರು ತಮ್ಮ ಶಾರ್ಟ್ ಟೆಂಪರ್ ಹಾಗೂ ಕಾಂಟ್ರವರ್ಸಿಗಳಿಗೆ ಹೆಸರುವಾಸಿಯಾಗಿದ್ದಾರೆ. ಈಗ ಮತ್ತೊಂದು ಕಾಂಟ್ರವರ್ಸಿಯಲ್ಲಿ ಸಿಲುಕಿದ್ದಾರೆ ಬಾಲಯ್ಯ.

ವಿಶ್ವಕ್ ಸೇನ್ ಅವರ ನಿರ್ದೇಶನದ ‘ಗ್ಯಾಂಗ್ ಆಫ್ ಗೋದಾವರಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಆಗಮಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ವಿಶ್ವಕ್ ಸೇನ್, ನೇಹಾ ಶೆಟ್ಟಿ, ಅಂಜಲಿ ಹಾಗೂ ಇನ್ನಿತರ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಖಾಲಿ ಸ್ಥಳ ಸೃಷ್ಟಿಸುವ ನಿಟ್ಟಿನಲ್ಲಿ ಬಾಲಯ್ಯ ಅಂಜಲಿ ಅವರನ್ನು ತಳ್ಳಿದ್ದಾರೆ. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ‌

ಬಾಲಯ್ಯ ತಳ್ಳಿದ್ದನ್ನು ನೆಟ್ಟಿಗರು ‘ಮಹಿಳೆಗೆ ಅಗೌರವ ತೋರಿದ್ದಾರೆ’ ಎಂದು ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆ ಚಿತ್ರತಂಡವಾಗಲಿ ಅಥವಾ ಬಾಲಕೃಷ್ಣ ಆಗಲಿ ಸ್ಪಷ್ಟಣೆ ನೀಡಿಲ್ಲ.

Show More

Related Articles

Leave a Reply

Your email address will not be published. Required fields are marked *

Back to top button