ಬೆಂಗಳೂರು ಟೆಕ್ ಸಮಿಟ್ 2024: ಕರ್ನಾಟಕಕ್ಕೆ ಮೂರು ನೂತನ ಜಾಗತಿಕ ಅಭಿವೃದ್ಧಿ ಜಿಲ್ಲೆಗಳ ಘೋಷಣೆ..!
ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ನಗರದ ಪ್ಯಾಲಸ್ ಮೈದಾನದಲ್ಲಿ 27ನೇ ಬೆಂಗಳೂರು ಟೆಕ್ ಸಮಿಟ್‌ಗೆ ಚಾಲನೆ ನೀಡಿದರು. IT&BT ಇಲಾಖೆ ಮತ್ತು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (STPI) ಜಂಟಿಯಾಗಿ ಆಯೋಜಿಸಿರುವ ಈ ಐಕಾನಿಕ್ ಸಮಾವೇಶಕ್ಕೆ ಜಾಗತಿಕ ಮಟ್ಟದ ಪ್ರತಿನಿಧಿಗಳು ಬಾಗಿಯಾಗಿದ್ದಾರೆ.
ವಿದೇಶಿ ಪ್ರತಿನಿಧಿಗಳ ಸಮಾಗಮ:
ಈ ಬಾರಿ 15 ಕ್ಕೂ ಹೆಚ್ಚು ದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದು, ಆಸ್ಟ್ರೇಲಿಯಾ, ಯುಕೆ, ಫ್ರಾನ್ಸ್, ಜರ್ಮನಿ, ಸ್ವಿಜರ್ಲ್ಯಾಂಡ್, ಇಸ್ರೇಲ್, ಯುಎಸ್‌ಎ ಸೇರಿ ಹಲವು ರಾಷ್ಟ್ರಗಳ ತಾಂತ್ರಿಕ ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ:
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬೆಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲಿ ಮೂರು ಜಾಗತಿಕ ಆವಿಷ್ಕಾರ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಘೋಷಿಸಿದರು. “ಈ ಮೂವರು ಜಿಲ್ಲೆಗಳು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ವೃದ್ಧಿಗೆ ಉತ್ತೇಜನ ನೀಡಲಿವೆ. ಅಲ್ಲದೇ, ಇವುಗಳಲ್ಲಿ ಗ್ಲೋಬಲ್ ಕೇಪಿಬಿಲಿಟಿ ಸೆಂಟರ್ (GCC) ಗಳನ್ನು ಸ್ಥಾಪಿಸಲಾಗುತ್ತದೆ,” ಎಂದು ತಿಳಿಸಿದರು.
ಸ್ಟಾರ್ಟಪ್‌ಗಳಿಗೆ ವಿಶೇಷ ವೇದಿಕೆ:
2500 ಕ್ಕೂ ಹೆಚ್ಚು ಸ್ಟಾರ್ಟಪ್ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸ್ಟಾರ್ಟಪ್ ಪೆವಿಲಿಯನ್ ನಲ್ಲಿ ಆರೋಗ್ಯ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ, ಉತ್ಪಾದನೆ ಮತ್ತು ಎಡ್ಯೂಟೆಕ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೊಸ ಪರಿಹಾರಗಳು ಪ್ರದರ್ಶಿಸಲಾಗುತ್ತವೆ.
ಇನ್ನಷ್ಟು ವಿಶೇಷತೆಗಳು:
ಸಮಾವೇಶದಲ್ಲಿ ಮೈಕ್ರೋಸಾಫ್ಟ್, ಇಂಟೆಲ್, ಆಕ್ಸೆಂಚರ್, IBM ಮತ್ತು BFSI ಕನ್ಸಾರ್ಟಿಯಂ ಒಟ್ಟು ಐದು ಒಪ್ಪಂದಗಳನ್ನು ಸಹಿ ಮಾಡಿದ್ದು, ಒಂದು ಲಕ್ಷ ಯುವ ಉದ್ಯೋಗಿಗಳ ಕೌಶಲ್ಯವನ್ನು ಹೆಚ್ಚಿಸುವ ಯೋಜನೆಗಳನ್ನು ಪ್ರಾರಂಭಿಸಲಾಗಿದೆ.