India
ಬಾರಾಮುಲ್ಲಾ ಭೂಕಂಪನ: ಒಂದು ಗಂಟೆಯೊಳಗೆ 4.8 ಮತ್ತು 4.3 ತೀವ್ರತೆಯ ಎರಡು ಭೂಕಂಪಗಳು!

ಶ್ರೀನಗರ: ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ (ಅಗಸ್ಟ್ 20, 2024) ನಿರಂತರ ಎರಡು ಭೂಕಂಪನಗಳು ಸಂಭವಿಸಿ ಜನರಲ್ಲಿ ಆತಂಕ ಉಂಟುಮಾಡಿವೆ. ಮೊದಲ ಭೂಕಂಪನದ ತೀವ್ರತೆ 4.8 ರಿಕ್ಟರ್ ಮಾಪಕದಲ್ಲಿ ದಾಖಲಾಗಿದ್ದು, ಒಂದು ಗಂಟೆಯೊಳಗೆ ಮತ್ತೊಂದು 4.3 ತೀವ್ರತೆಯ ಭೂಕಂಪನವೂ ಉಂಟಾಗಿದೆ.
ಈ ಭೂಕಂಪನಗಳ ಕೇಂದ್ರ ಬಿಂದು ಬಾರಾಮುಲ್ಲಾದಿಂದ 10 ಕಿಲೋಮೀಟರ್ ದೂರದಲ್ಲಿದ್ದು, ಪ್ರಸ್ತುತ ಯಾವುದೇ ಸಾವು-ನೋವು ಅಥವಾ ಆಸ್ತಿ ಹಾನಿಯ ವರದಿಗಳು ಲಭ್ಯವಿಲ್ಲ. ಜಿಲ್ಲೆಯಲ್ಲಿ ರಕ್ಷಣಾ ತಂಡಗಳು ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ಪರಿಸ್ಥಿತಿಯನ್ನು ಶಮನ ಮಾಡಲು ಕ್ರಮವಹಿಸುತ್ತಿವೆ.