Politics

ಪ್ರಧಾನಿ ಮೋದಿ ಕುರಿತು ಪ್ರಶ್ನಿಸಿದ ಬಿಬಿಸಿ: ಜೈಶಂಕರ್ ಅವರ ಬೆಂಕಿ ಉತ್ತರಕ್ಕೆ ದಂಗು!

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಕ್ರೇನ್ ಭೇಟಿಯ ಸಂದರ್ಭದಲ್ಲಿ, ಬಿಬಿಸಿ ವರದಿಗಾರರು ಒಂದು ಕುತೂಹಲಕಾರಿ ಪ್ರಶ್ನೆ ಮುಂದಿಟ್ಟರು: “ಮೋದಿ ಪುಟಿನ್ ಅವರನ್ನು ಯಾಕೆ ಅಪ್ಪಿಕೊಂಡರು?” ಎಂದು.

ಈ ಪ್ರಶ್ನೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬೆಂಕಿ ಉತ್ತರ ನೀಡಿದ್ದಾರೆ. ” ಅದು ನಿಮ್ಮ ಸಂಸ್ಕೃತಿಯ ಭಾಗವಾಗದಿರಬಹುದು, ಆದರೆ ನಮ್ಮ ಸಂಸ್ಕೃತಿಯ ಭಾಗವಾಗಿದೆ” ಎಂದು ಜೈಶಂಕರ್ ತಿರುಗೇಟು ನೀಡಿದರು.

“ನಮ್ಮ ಭಾಗದಲ್ಲಿ, ಜನರು ಒಬ್ಬರನ್ನೊಬ್ಬರು ಭೇಟಿ ಮಾಡಿದಾಗ, ಅವರು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ಮೋದಿಜಿ ಇಂದು ಝೆಲೆನ್ಸ್ಕಿಯನ್ನು ಕೂಡ ಅಪ್ಪಿಕೊಂಡಿದ್ದಾರೆ” ಎಂದು ಜೈಶಂಕರ್ ಅವರು ಹೇಳಿದರು.

ಈ ತೀಕ್ಷ್ಣ ಪ್ರತಿಕ್ರಿಯೆಯು ಬಿಬಿಸಿಯನ್ನು ತೀವ್ರ ಮುಜುಗರಕ್ಕೆ ಗುರಿ ಮಾಡಿತು, ಮತ್ತು ಜೈಶಂಕರ್ ಅವರ ತಿರುಗೇಟು ಜಾಗತಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಹೇಳಿಕೆಯು ಭಾರತ ಮತ್ತು ಪಶ್ಚಿಮ ದೇಶಗಳ ಸಂಸ್ಕೃತಿಗಳ ನಡುವಿನ ವ್ಯತ್ಯಾಸವನ್ನು ತೋರಿಸುವುದರ ಜೊತೆಗೆ, ಭಾರತೀಯ ರಾಜಕಾರಣಿಗಳ ಆತ್ಮವಿಶ್ವಾಸವನ್ನು ಮತ್ತೊಮ್ಮೆ ಎದ್ದು ತೋರಿಸಿದೆ.

Show More

Related Articles

Leave a Reply

Your email address will not be published. Required fields are marked *

Back to top button