Bengaluru
ಕನ್ನಡ ನಾಮಫಲಕ ಹಾಕದವರ ವಿರುದ್ಧ ಬಿಬಿಎಂಪಿ ಕ್ರಮ.

ಬೆಂಗಳೂರು: ನಗರದಲ್ಲಿ ಕನ್ನಡ ನಾಮಫಲಕ ಹೊಂದಿರದ ಮಾಲ್ ಆಫ್ ಏಷ್ಯಾದ ಕೆಲವು ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡಿದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.

ಈ ಅಂಗಡಿಗಳ ಉದ್ದಿಮೆದಾರರಿಗೆ ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆ ನೋಟಿಸ್ ನೀಡಿತ್ತು. ಅದಾದ ಮೇಲೂ ಕೂಡ ತಮ್ಮ ಅಂಗಡಿಗಳ ನಾಮಫಲಕಗಳನ್ನು ಕನ್ನಡ ಭಾಷೆಗೆ ಬದಲಾಯಿಸದೆ ಇದ್ದದಕ್ಕಾಗಿ ಬಿಬಿಎಂಪಿ ಅವರು ಟ್ರೇಡ್ ಲೈಸೆನ್ಸ್‌ನ್ನು ರದ್ದು ಮಾಡಿದ್ದಾರೆ.
ಬಿಬಿಎಂಪಿಯ ಈ ನಿರ್ಧಾರವು ಕನ್ನಡ ನಾಮಪಲಕ ಹೊಂದಿರದ ಇನ್ನಿತರ ಅಂಗಡಿಗಳಿಗೆ ಬಿಸಿ ಮುಟ್ಟಿಸಿದೆ.