Bengaluru

BBMP ‘Save Mom’ Platform: ಕೃತಕ ಬುದ್ಧಿಮತ್ತೆಯಿಂದ ತಾಯಂದಿರ ಆರೈಕೆ ಸಾದ್ಯವೇ?!

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೊಸ ಯೋಜನೆ ‘ಸೇವ್ ಮಾಮ್’ (Save Mom) ಹೆಸರಿನ ತಾಯಿ-ಮಗು ಆರೈಕೆ ಆಧಾರಿತ ಪ್ಲಾಟ್‌ಫಾರ್ಮ್ ಅನ್ನು ಬುಧವಾರ ಪ್ರಾರಂಭಿಸಿದೆ. AI ಆಧಾರಿತ ಈ ಯೋಜನೆಯು 1,000 ದಿನಗಳ ಕಾಲ ಗರ್ಭಿಣಿಯರ ಹಾಗೂ ಶಿಶುಗಳ ಆರೋಗ್ಯದ ಮೇಲೆ ಕಾಳಜಿ ವಹಿಸಿ ಕಾಪಾಡಲು ಸಹಕಾರಿಯಾಗಲಿದೆ. ಈ ಕಾರ್ಯಕ್ರಮದ ಮೂಲಕ ಬಿಬಿಎಂಪಿ ಆರೋಗ್ಯ ಇಲಾಖೆಯ ಸೇವೆಗಳು ತತ್ಕ್ಷಣದ ಸಮಯದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ.

ಈ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಬಿಬಿಎಂಪಿ ತಾಯಿ-ಮಗು ಆರೋಗ್ಯದ ಬಗ್ಗೆ ವ್ಯಕ್ತಿಗತವಾದ ಗಮನ ಹಾಗೂ ನಿರಂತರ ಆರೈಕೆ ನೀಡಲಿದ್ದು, ಆರೋಗ್ಯ ಸೇವೆಗಳ ಸುಲಭ ಲಭ್ಯತೆಗೆ ಪ್ರಾಮುಖ್ಯತೆ ನೀಡುವ ಪ್ರಯತ್ನ ಮಾಡುತ್ತಿದೆ.

ರೇಬೀಸ್ ಜಾಗೃತಿ ಅಭಿಯಾನ:

ಬಿಬಿಎಂಪಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟು, ನಗರದ ಬೀದಿ ನಾಯಿಗಳಿಂದ ಹರಡುತ್ತಿರುವ ರೇಬೀಸ್ ಕಾಯಿಲೆ ವಿರುದ್ಧ ಜಾಗೃತಿ ಮೂಡಿಸಲು ವಿಶೇಷ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಉದ್ದೇಶ ನಾಗರಿಕರು ಹಾಗೂ ನಾಯಿಗಳಲ್ಲಿ ಆರೋಗ್ಯಕರ ಸಂಬಂಧ ಬೆಳೆಸುವಂತೆ ಪ್ರೋತ್ಸಾಹಿಸುವುದು.

ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ವಯಂಸೇವಕರು ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ ರೇಬೀಸ್ ತಡೆಯ ಕುರಿತು ಅರಿವು ನೀಡುತ್ತಿದ್ದಾರೆ. ಎಲ್ಇಡಿ ಡಿಸ್ಪ್ಲೇ‌ಗಳೊಂದಿಗೆ ಅಭಿಯಾನ ವಾಹನಗಳು ನಗರಾದ್ಯಾಂತ ಸಂದೇಶ ಹರಡುತ್ತಿವೆ. ಈ ವರ್ಷ 43,656 ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಗಿದೆ, ಮತ್ತು ಬಿಬಿಎಂಪಿ ಬೇಟೆ ಮಾಡಿದ ನಾಯಿಗಳ ಕಡಿತಕ್ಕೆ ಒಳಗಾದ ವ್ಯಕ್ತಿಗಳಿಗೆ ಉಚಿತ ಲಸಿಕೆ ಮತ್ತು ಚಿಕಿತ್ಸೆ ಒದಗಿಸುತ್ತಿದೆ.

Show More

Leave a Reply

Your email address will not be published. Required fields are marked *

Related Articles

Back to top button