ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ ಕಠಿಣ ಶಿಕ್ಷೆಯಾದ 7 ವರ್ಷ ಜೈಲು ಮತ್ತು ಬಹಳಷ್ಟು ದಂಡ ವಿಧಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪಿನಂತೆ, 6 ಕೋಟಿ ದಂಡವಿದ್ದು, ಈ ಜೈಲು ಶಿಕ್ಷೆಯಿಂದ ತಕ್ಷಣವೇ ಅವರ ವಿಧಾನಸಭಾ ಸದಸ್ಯ ಸ್ಥಾನ ರದ್ದುಗೊಳ್ಳಲಿದೆ.
ಶಿಕ್ಷೆಯ ವಿವರಗಳು:
- ಮೊದಲ ಮತ್ತು ಎರಡನೇ ಪ್ರಕರಣಗಳಲ್ಲಿ, 6 ಕೋಟಿ ದಂಡ ಜೊತೆಗೆ ಏಳು ವರ್ಷ ಜೈಲು ಶಿಕ್ಷೆ.
- ಕಳ್ಳತನದ ಆರೋಪದಲ್ಲಿ 3 ವರ್ಷ ಜೈಲು ಮತ್ತು 6 ಕೋಟಿ ದಂಡ.
- ಒಳಸಂಚು ಆರೋಪದಲ್ಲಿ 5 ವರ್ಷ ಶಿಕ್ಷೆ ಮತ್ತು 20 ಸಾವಿರ ದಂಡ.
- ವಂಚನೆ ಪ್ರಕರಣದಲ್ಲಿ 9.36 ಕೋಟಿ ದಂಡ ಜೊತೆಗೆ ಏಳು ವರ್ಷ ಜೈಲು.
ಶಿಕ್ಷೆ ಕಡಿಮೆ ಮಾಡಲು ಮನವಿ:
ಶಾಸಕ ಸತೀಶ್ ಸೈಲ್ ಅವರ ಪರವಾಗಿ, ಹಿರಿಯ ವಕೀಲರು ನ್ಯಾಯಾಲಯಕ್ಕೆ ಆರೋಗ್ಯ ಸಮಸ್ಯೆಗಳು ಸೈಲ್ ಅವರಿಗಿದೆ ಎಂದು ಮನವಿ ಮಾಡಿದ್ದು, ಕಂಪನಿ ಕಡೆಯಿಂದ ನಡೆದ ಅಕ್ರಮಕ್ಕೆ ಸೈಲ್ ವೈಯಕ್ತಿಕವಾಗಿ ಜವಾಬ್ದಾರರು ಅಲ್ಲ ಎಂದು ವಾದಿಸಿದರು.
ಕೋರ್ಟ್‌ನಲ್ಲಿ ಭಾವುಕರಾದ ಶಾಸಕ ಸೈಲ್:
ನ್ಯಾಯಾಧೀಶರು ಶಾಸಕರಿಗೆ ಮಾತಾಡಲು ಅವಕಾಶ ನೀಡಿದಾಗ, ತಮ್ಮ ಪತ್ನಿ ಹಾಗೂ ಮಕ್ಕಳ ಸ್ಥಿತಿಯ ಕುರಿತು ಕಣ್ಣೀರು ಹಾಕಿಕೊಂಡು ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಮನವಿ ಮಾಡಿದರು ಸತೀಶ್ ಸೈಲ್.
ಈ ತೀರ್ಪು ಉಪ ಚುನಾವಣೆ ಸಮೀಪಿಸುತ್ತಿರುವಾಗ ಕಾಂಗ್ರೆಸ್ ಪಕ್ಷಕ್ಕೆ ಭಾರೀ ತಲೆನೋವು ತಂದಿದೆ, ಇದನ್ನು ಇತ್ತ ಬಿಜೆಪಿ ಪ್ರಚಾರದ ದಾಳವಾಗಿ ಬಳಸುತ್ತಿದೆ.