Bengaluru

ಬೆಂಗಳೂರು-‌ ಕಲಬುರ್ಗಿ ವಿಶೇಷ ರೈಲು ಸೇವೆ: ಗಣೇಶೋತ್ಸವದ ಪ್ರಯುಕ್ತ ಪ್ರಯಾಣಿಕರಿಗೆ ಸಿಹಿ ಸುದ್ದಿ..!

ಬೆಂಗಳೂರು: ಗಣೇಶೋತ್ಸವದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು, ರೈಲ್ವೆ ಇಲಾಖೆ ಬೆಂಗಳೂರು ಎಸ್‌ಎಂವಿಟಿ (ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್) ಮತ್ತು ಕಲಬುರಗಿ ನಡುವಿನ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಸೆಪ್ಟೆಂಬರ್ 5, 6, ಮತ್ತು 7 ರಂದು ಈ ವಿಶೇಷ ರೈಲುಗಳನ್ನು ಸಂಚಾಲನೆ ಮಾಡಲಾಗುತ್ತದೆ.

ರೈಲು ವೇಳಾಪಟ್ಟಿ:

  • ಬೆಂಗಳೂರು – ಕಲಬುರ್ಗಿ: ಎಸ್‌ಎಂವಿಟಿಯಿಂದ ರೈಲು ರಾತ್ರಿ 9.15ಕ್ಕೆ ಹೊರಟು, ಮರುದಿನ ಬೆಳಗ್ಗೆ 7.40ಕ್ಕೆ ಕಲಬುರಗಿ ತಲುಪಲಿದೆ.
  • ಕಲಬುರಗಿ – ಬೆಂಗಳೂರು: ಸೆಪ್ಟೆಂಬರ್ 6, 7, ಮತ್ತು 8 ರಂದು, ಕಲಬುರಗಿಯಿಂದ ಬೆಳಗ್ಗೆ 9.35ಕ್ಕೆ ಹೊರಟು, ಅದೇ ದಿನ ರಾತ್ರಿ 9ಕ್ಕೆ ಬೆಂಗಳೂರು ತಲುಪಲಿದೆ.

ಪ್ರಯಾಣಿಕರು ಈ ವಿಶೇಷ ರೈಲು ಸೇವೆಯ ಸದುಪಯೋಗವನ್ನು ಪಡೆದು, ತಮ್ಮ ಹಬ್ಬದ ಪ್ರಯಾಣವನ್ನು ಸುಗಮಗೊಳಿಸಿಕೊಳ್ಳಲು ಅವಕಾಶವಿದೆ. ಗಣೇಶೋತ್ಸವದ ಹಬ್ಬದ ಪ್ರಯುಕ್ತ, ಕುಟುಂಬದವರ ಜೊತೆ ಸಂಭ್ರಮಿಸಲು ಈ ವಿಶೇಷ ರೈಲು ನಿಸ್ಸಂದೇಹವಾಗಿ ಸಹಾಯ ಮಾಡಲಿದೆ.

Show More

Leave a Reply

Your email address will not be published. Required fields are marked *

Related Articles

Back to top button