ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣಾ ಫಲಿತಾಂಶ ಪ್ರಕಟ.
ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರದ ಹಲವು ಗಣ್ಯರನ್ನು ಒಳಗೊಂಡ ಬೆಂಗಳೂರು ಪ್ರೆಸ್ ಕ್ಲಬ್‌ನ ಚುನಾವಣಾ ಫಲಿತಾಂಶ ಇಂದು ದಿನಾಂಕ:07-07-2024ರಂದು ಪ್ರಕಟವಾಗಿದೆ. 2017ರಲ್ಲಿ ನೊಂದಾಯಿಸಲ್ಪಟ್ಟ ಬೆಂಗಳೂರು ಪ್ರೆಸ್ ಕ್ಲಬ್ ಪ್ರಸ್ತುತ 2000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಬೆಂಗಳೂರು ನಗರ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದರ ಸಮಿತಿಗಳಿವೆ.
2024ರ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಇಂತಿದೆ.
ಅಧ್ಯಕ್ಷರು- ಆರ್. ಶ್ರೀಧರ್.
ಉಪಾಧ್ಯಕ್ಷರು – ಮೋಹನ್ ಕುಮಾರ್,
ಪ್ರಧಾನ ಕಾರ್ಯದರ್ಶಿಗಳು – ಶಿವಕುಮಾರ್ ಬೆಳ್ಳಿ ತಟ್ಟೆ
ಕಾರ್ಯದರ್ಶಿಗಳು – ಮಂಜುನಾಥ್ ಜಿ.ವೈ.
ಜಂಟಿ ಕಾರ್ಯದರ್ಶಿಗಳು – ಧರಣೀಶ್ ಬಿ.ಎನ್.
ಖಜಾಂಚಿ – ಗಣೇಶ್ ಜಿ.
ಕಾರ್ಯಕಾರಿ ಸಮಿತಿ:-
ಶಿವಣ್ಣ
ಯಾಸಿರ್ ಮುಸ್ತಾಕ್
ಶರಣಬಸಪ್ಪ ಎ.ಎಚ್.
ಮಮ್ತಾಜ್ಅಲಿಮ್
ರೋಹಿಣಿ ವಿ. ಅಡಿಗ
ಸಿ.ಆರ್.ಮಂಜುನಾಥ್.
ಮಹಿಳಾ ಮೀಸಲು ಕ್ಷೇತ್ರ:-
ಮಿನಿ ತೇಜಸ್ವಿನಿ.
ಇವರುಗಳು 2024- 25ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಚುನಾಯಿತರಾದವರು.