ಅತ್ಯಾಚಾರಿಗಳನ್ನು “B@$**ds” ಎಂದ ಭಜರಂಗಿ ಭಕ್ತ ಧ್ರುವ ಸರ್ಜಾ!.
ಬೆಂಗಳೂರು: ನಟ ಧ್ರುವ ಸರ್ಜಾ, ಭಾರತದಲ್ಲಿ ಅತ್ಯಾಚಾರ ಪ್ರಕರಣಗಳ ಬೆಳವಣಿಗೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ “ಪ್ರತಿ 16 ನಿಮಿಷಕ್ಕೊಮ್ಮೆ ಒಂದು ಭಾರತೀಯ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಯುತ್ತಿದೆ” ಎಂಬ ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
“ಯತ್ರ ನಾರ್ಯಸ್ತು ಪೂಜ್ಯಂತೇ ರಮನ್ತೇ ತತ್ರ ದೇವತಾ” ಎಂಬ ವಾಣಿಯನ್ನು ಉಲ್ಲೇಖಿಸಿ, ಧ್ರುವ ಸರ್ಜಾ, “ಹೆಣ್ಣುಮಕ್ಕಳಿಗೆ ಗೌರವವಿರುವಲ್ಲಿ ದೇವರು ಇರುತ್ತಾನೆ. ನಮ್ಮ ದೇಶವನ್ನು ರಾಮ ಜನ್ಮಭೂಮಿ ಎಂದು ಕರೆಯುತ್ತಿದ್ದರೂ, ಕೆಲವು ದುಷ್ಟರು ತಮ್ಮ ಕ್ರೂರ ಕೃತ್ಯಗಳಿಂದ ದೇಶಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಧ್ರುವ ಸರ್ಜಾ, ಗಂಡು ಮಕ್ಕಳಿಗೆ ಹೇಗೆ ಹೆಣ್ಣುಮಕ್ಕಳಿಗೆ ರಕ್ಷಣೆ, ಬೆಂಬಲ ಮತ್ತು ಗೌರವ ನೀಡಬೇಕು ಎಂಬುದನ್ನು ತಮ್ಮ ಮನೆಯಲ್ಲಿ ಕಲಿಸಬೇಕೆಂದು ಸಲಹೆ ನೀಡಿದ್ದಾರೆ. ಅವರು ಈ ಹೇಯ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಬಲವಾಗಿ ಒತ್ತಾಯಿಸಿದ್ದಾರೆ.
ಧ್ರುವ ಸರ್ಜಾ ಅವರ ಈ ದೃಢನಿಲುವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಗೀಡಾಗಿದ್ದು, ಮಹಿಳಾ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಸಾಮಾಜಿಕ ಹೋರಾಟವನ್ನು ಉತ್ತೇಜಿಸಿದೆ.