ರಾಹುಲ್ ದ್ರಾವಿಡ್‌ಗೆ ಭಾರತ ರತ್ನ?!

ನವದೆಹಲಿ: 2024ರ ಟಿ-20 ವಿಶ್ವಕಪ್ ಪಂದ್ಯಾವಳಿಯ ವಿಜೇತ ತಂಡವಾದ ಭಾರತದ ಹೆಡ್ ಕೋಚ್ ಆದಂತ, ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಹಾಗೂ ಭಾರತ ತಂಡದ ಮಾಜಿ ನಾಯಕ, ರಾಹುಲ್ ದ್ರಾವಿಡ್ ಅವರಿಗೆ ಕ್ರಿಕೆಟ್ ಅಭಿಮಾನಿಗಳಿಂದ ಹಾಗೂ ಕ್ರಿಕೆಟ್ ದಿಗ್ಗಜರುಗಳಿಂದ ಸಾಲು ಸಾಲು ಅಭಿನಂದನೆಗಳು ಹರಿದು ಬರುತ್ತಿದೆ.
ಅವುಗಳಲ್ಲಿ ಒಂದು ಎಂದರೆ, ಭಾರತೀಯ ಕ್ರಿಕೆಟ್ ದಂತಕಥೆ, ಸುನಿಲ್ ಗಾವಸ್ಕರ್ ಅವರ ಹೇಳಿಕೆ, “ಭಾರತ ಸರ್ಕಾರವು ಅವರಿಗೆ (ರಾಹುಲ್ ದ್ರಾವಿಡ್) ಭಾರತ ರತ್ನ ನೀಡಿ ಗೌರವಿಸಿದರೆ ಅದು ಸೂಕ್ತವಾಗಿರುತ್ತದೆ. ಪ್ರಸಿದ್ಧ ಆಟಗಾರ ಮತ್ತು ದೇಶದ ನಾಯಕ ವೆಸ್ಟ್ ಇಂಡೀಸ್‌ನಲ್ಲಿ ಪ್ರಸಿದ್ಧ ವಿದೇಶ ಸರಣಿ ಗೆದ್ದಾಗ ಅಲ್ಲಿ ಗೆಲುವುಗಳು ನಿಜವಾಗಿಯೂ ಏನನ್ನಾದರೂ ಅರ್ಥೈಸುತ್ತವೆ ಮತ್ತು ಗೆಲ್ಲುತ್ತವೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯದ ಸರಣಿಯನ್ನು ಗೆದ್ದ ಮೂವರು ಭಾರತೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ, ಅವರ ಹಿಂದಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರ ಪಾತ್ರದಲ್ಲಿ ಮತ್ತು ನಂತರ ಹಿರಿಯ ತಂಡದ ತರಬೇತುದಾರರಾಗಿ ಅದ್ಭುತ ಪ್ರತಿಭಾನ್ವಿತರಾಗಿದ್ದಾರೆ…,”
ಈ ರೀತಿ ಸುನಿಲ್ ಗಾವರ್ಸ್ಕರ್ ಅವರು ರಾಹುಲ್ ದ್ರಾವಿಡ್ ಅವರಿಗೆ ಭಾರತರತ್ನ ನೀಡಿ ಗೌರವಿಸಬೇಕೆಂದು ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಆಗಿದ್ದಾರೆ. ಎರಡನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಅವರನ್ನು ನೋಡಬಹುದೇ?