ಬಯಲಾಯ್ತು ಬಿಡೆನ್ ಬಂಡವಾಳ: ಒತ್ತಡಕ್ಕೆ ಮಣಿದರೇ ಮೆಟಾ ಸಿಇಒ ಮಾರ್ಕ್ ಝುಕೆರ್ಬೆರ್ಗ..?!
ವಾಷಿಂಗ್ಟನ್: ಮೆಟಾ (ಹಿಂದೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ) ಸಂಸ್ಥಾಪಕ ಮಾರ್ಕ್ ಝುಕೆರ್ಬೆರ್ಗ, ಕೋವಿಡ್ ಸಮಯದಲ್ಲಿ ಬಿಡನ್-ಹ್ಯಾರಿಸ್ ಆಡಳಿತದ ಒತ್ತಡಕ್ಕೆ ಒಳಗಾದ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಝುಕೆರ್ಬೆರ್ಗ ಅವರ ಹೇಳಿಕೆಯು ಈಗ ಮಾಧ್ಯಮ ಜಗತ್ತಿನಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಚೇರ್ಮನ್ ಜಿಮ್ ಜೋರ್ಡಾನ್ ಮತ್ತು ಹೌಸ್ ಜುಡಿಷಿಯರಿ ಸಮಿತಿಗೆ ಬರೆದ ಪತ್ರದಲ್ಲಿ, ಜುಕರ್ಬರ್ಗ್ ಆಡಳಿತದ ಒತ್ತಡಕ್ಕೆ ಮಣಿದು, ಮೆಟಾದಲ್ಲಿ ಕೋವಿಡ್ ಸಂಬಂಧಿತ ಪೋಸ್ಟ್‌ಗಳನ್ನು ಸೆನ್ಸಾರ್ ಮಾಡುವ ಕೆಲಸಕ್ಕೆ ಒಪ್ಪಿಕೊಂಡಿದ್ದಾರೆ. ಈ ಪೋಸ್ಟ್‌ಗಳು, ವ್ಯಂಗ್ಯ ಮತ್ತು ಹಾಸ್ಯವನ್ನೂ ಸೇರಿಸಿ, ಸಾರ್ವಜನಿಕ ಚರ್ಚೆಗೆ ಅವಕಾಶ ನೀಡದಂತೆ ಮಾಡಲು ಮೆಟಾಗೆ ತಾಕೀತು ಮಾಡಿದ್ದರು.
“ಸರ್ಕಾರದ ಒತ್ತಡ ತಪ್ಪಾಗಿತ್ತು, ಮತ್ತು ಅದನ್ನು ಸವಾಲು ಮಾಡದಿರುವುದಕ್ಕೆ ನಾನು ವಿಷಾದಿಸುತ್ತೇನೆ,” ಎಂದು ಝುಕೆರ್ಬೆರ್ಗ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಈ ಹೇಳಿಕೆಯು ಜಾಗತಿಕವಾಗಿ ಸಾಮಾಜಿಕ ಮಾಧ್ಯಮ ಮತ್ತು ಸರ್ಕಾರದ ಸಂಬಂಧದ ಕುರಿತಾದ ತೀವ್ರ ಚರ್ಚೆಗೆ ಕಾರಣವಾಗಿದೆ.