ಗೋಕಾಕ್ ಮಹಾಲಕ್ಷ್ಮಿ ಬ್ಯಾಂಕಿನಲ್ಲಿ ಭಾರಿ ಹಗರಣ: ಬರೋಬ್ಬರಿ 75 ಕೋಟಿ ರೂಪಾಯಿ ನುಂಗಿದವರು ಯಾರು?!
ಗೋಕಾಕ್: ಶಹರದ ಜನಪ್ರಿಯ ಗೋಕಾಕ್ ಮಹಾಲಕ್ಷ್ಮಿ ಬ್ಯಾಂಕಿನಲ್ಲಿ 75 ಕೋಟಿ ರೂ.ನ ಭಾರಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಘಟನೆ ನಗರದ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 2021 ಜನವರಿಯಿಂದ 2024 ಏಪ್ರಿಲ್ ತಿಂಗಳ ವರೆಗೆ ಈ ಹಗರಣ ನಡೆದಿದ್ದು, ಬ್ಯಾಂಕಿನ 5 ಮಂದಿ ಸಿಬ್ಬಂದಿಗಳು ಆಪ್ತ ಸಂಬಂಧಿಗಳ ಹೆಸರಿನಲ್ಲಿ 6.97 ಕೋಟಿ ರೂ.ನ ಠೇವಣಿ ಇರಿಸಿ, 81.83 ಕೋಟಿ ರೂ.ನ ಕೃತ್ರಿಮ ಸಾಲ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣವನ್ನು ಕುರಿತಂತೆ, ಬ್ಯಾಂಕಿನ ಉಪಾಧ್ಯಕ್ಷ ಜೀತು ಮಾಂಗಲೆಕರ್ ಅವರು 5 ಮಂದಿ ಸಿಬ್ಬಂದಿಗಳ ವಿರುದ್ಧ ಗೋಕಾಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಕ್ಷಣವೇ ಪ್ರಕರಣ ದಾಖಲಾಗಿದೆ. ಹಗರಣದ ಹಣದಿಂದ ಹಲವೆಡೆ ಭೂಮಿ ಖರೀದಿ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ವಿಚಾರಣೆಯನ್ನು ಪೊಲೀಸ್ ಉಪನಿರೀಕ್ಷಕ ದಾದಾಪೀರ್ ಮುಲ್ಲಾ, ಮತ್ತು ಇನ್ಸ್‌ಪೆಕ್ಟರ್ ಗೋಪಾಲ್ ರಾಥೋಡ್ ಅವರ ಮಾರ್ಗದರ್ಶನದಲ್ಲಿ, ಸಬ್-ಇನ್ಸ್‌ಪೆಕ್ಟರ್ ಕೆ.ಬಿ. ವಾಲಿಕರ್ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಈ ಘಟನೆಯು ರಾಜ್ಯದಲ್ಲಿ ಬ್ಯಾಂಕಿನ ವ್ಯವಹಾರ ವ್ಯವಸ್ಥೆಗಳನ್ನು ಪ್ರಶ್ನಿಸುವಂತೆ ಮಾಡಿದೆ.