ಬಾಲಿವುಡ್‌ಗೆ ಬಿಗ್ ಶಾಕ್: ಮಲೈಕಾ ಅರೋರಾ ತಂದೆ ಅನಿಲ್ ಅರೋರಾ ಆತ್ಮಹತ್ಯೆ..?!
![](https://akeynews.com/wp-content/uploads/2024/09/thumbnail-for-Akey-news-Final-43-780x470.jpg)
ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಅವರು ಮುಂಬೈನ ಬಾಂದ್ರಾದಲ್ಲಿ ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದಿಂದ ಹಾರಿದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ. ಅವರ ದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಕಳುಹಿಸಲಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.
ಘಟನೆಯ ನಂತರ, ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅನಿಲ್ ಅರೋರಾ, ಪಂಜಾಬಿ ಕುಟುಂಬದಿಂದ ಬಂದವರಾಗಿದ್ದು, ಭಾರತೀಯ ಮಾರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದರು.
ಮಲೈಕಾ ಅರೋರಾ, ಥಾಣೆ (ಮಹಾರಾಷ್ಟ್ರ)ದಲ್ಲಿ ಜನಿಸಿದ್ದು, ಅವರ ಪೋಷಕರು ಮಲೈಕಾ 11 ವರ್ಷದಾಗಿದ್ದಾಗ ವಿಚ್ಛೇದನ ಹೊಂದಿದರು. ಅದಾದ ನಂತರ ಅವರು ತಮ್ಮ ತಾಯಿ ಮತ್ತು ಸಹೋದರಿ ಅಮೃತಾ ಅರೋರಾ ಅವರೊಂದಿಗೆ ಚೆಂಬೂರ್‌ಗೆ ಸ್ಥಳಾಂತರಗೊಂಡರು. ಕೆಲವು ಸಮಯಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ, ಮಲೈಕಾ ಅವರು ತಮ್ಮ ಬಾಲ್ಯದ ಸವಾಲುಗಳನ್ನು ಬಹಿರಂಗಪಡಿಸಿದ್ದರು. “ನನ್ನ ಬಾಲ್ಯ ಅದ್ಭುತವಾಗಿದ್ದರೂ, ಅದು ಸುಲಭವಾಗಿರಲಿಲ್ಲ. ನನ್ನ ಪೋಷಕರ ವಿವಾಹ ವಿಚ್ಛೇದನ ನನ್ನ ತಾಯಿಯನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡಿತು,” ಎಂದು ಅವರು ಹೇಳಿದ್ದಾರೆ.
ಮಲೈಕಾ ಅರೋರಾ ಅವರ ಕುಟುಂಬವು ಈ ಆಘಾತದ ಘಟನೆಯಿಂದ ದುಃಖದಲ್ಲಿ ಮುಳುಗಿದ್ದು, ಈ ಘಟನೆಗೆ ನಿಜವಾದ ಕಾರಣ ಏನೆಂಬುದು ಇನ್ನೂ ಬೆಳಕಿಗೆ ಬರಬೇಕಿದೆ.