ಇವರೇ ನೋಡಿ! ಬಿಜೆಪಿಯ ಸೆಲೆಬ್ರಿಟಿ ಅಭ್ಯರ್ಥಿಗಳು.
ನವದೆಹಲಿ: 18ನೇ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದ ಭಾರತೀಯ ಜನತಾ ಪಕ್ಷ , ಈ ಬಾರಿ ಹಲವು ಪ್ರಸಿದ್ಧ ಸೆಲಬ್ರಿಟಿಗಳಿಗೆ ಟಿಕೇಟ್ ನೀಡಿದೆ. ಹಾಗಾದರೆ, ಯಾರು ಈ ಸೆಲೆಬ್ರಿಟಿಗಳು ಎಂದು ನೋಡೋಣ ಬನ್ನಿ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಾಲಿವುಡ್‌ನ ಖ್ಯಾತ ನಟಿ ಹಾಗೂ ನಿರ್ಮಾಪಕಿ, ಕಂಗನಾ ರಾಣಾವತ್ ಬಿಜೆಪಿಯ ಟಿಕೆಟ್‌ನ್ನು ಪಡೆದಿದ್ದಾರೆ.
ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಿಂದ, ಪ್ರಸಿದ್ಧ ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರಧಾರಿಯಾಗಿ ಖ್ಯಾತಿ ಪಡೆದಂತಹ ಶ್ರೀ. ಅರುಣ್ ಗೋವಿಲ್ ಅವರು ಕಣಕ್ಕಿಳಿಯಲಿದ್ದಾರೆ.
ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಲ್ಲಿ, ಬಾಲಿವುಡ್‌ನ ಡ್ರೀಮ್ ಗರ್ಲ್ ಎಂದೇ ಖ್ಯಾತಿಯಾದ, ಹಾಲಿ ಸಂಸದೆ ಶ್ರೀಮತಿ. ಹೇಮಾ ಮಾಲಿನಿ ಅವರು ಸ್ಪರ್ಧಿಸಲಿದ್ದಾರೆ.
ಉತ್ತರ ಪ್ರದೇಶದ ಗೋರಕ್ಪುರ್ ಲೋಕಸಭಾ ಕ್ಷೇತ್ರದಿಂದ, ಭೋಜಪುರಿ ಚಿತ್ರರಂಗದ ಖ್ಯಾತ ನಟ, ಹಾಗೂ ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದ್ದ, ಶ್ರೀ. ರವಿ ಕಿಶನ್ ಅವರು ಕಣಕ್ಕಿಳಿಯಲಿದ್ದಾರೆ.
ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ, ಖ್ಯಾತ ನಟ ಹಾಗೂ ಗಾಯಕರಾದ ಶ್ರೀ. ಮನೋಜ್ ತಿವಾರಿಯವರು ಬಿಜೆಪಿ ವತಿಯಿಂದ ಸ್ಪರ್ಧಿಸಲಿದ್ದಾರೆ.
ಉತ್ತರ ಪ್ರದೇಶದ ಅಜಮ್ಗರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು, ‘ನಿರೌವಾ’ ಎಂದೆ ಖ್ಯಾತಿಯಾದ ಭೋಜಪುರಿ ಚಿತ್ರರಂಗದ ಪ್ರಸಿದ್ಧ ನಟ, ಶ್ರೀ. ದಿನೇಶ್ ಲಾಲ್ ಯಾದವ್ ತಯಾರಾಗಿದ್ದಾರೆ.
ಕೇರಳ ರಾಜ್ಯದ ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ, ಮಲಯಾಳಂ ಚಿತ್ರರಂಗದ ಖ್ಯಾತ ನಟ ಸುರೇಶ್ ಗೋಪಿ ಅವರು ಕಣಕ್ಕಿಳಿಯಲಿದ್ದಾರೆ.
ತಮಿಳುನಾಡಿನ ವಿರುಧುನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಪಡೆದು, ತಮಿಳು ಚಿತ್ರರಂಗದ ಖ್ಯಾತ ನಟಿ, ಹಾಗೂ ಖ್ಯಾತ ನಟ ಸರತ್ ಕುಮಾರ್ ಅವರ ಪತ್ನಿ, ಶ್ರೀಮತಿ. ರಾಧಿಕಾ ಸರತ್ ಕುಮಾರ್ ಸ್ಪರ್ಧಿಸಲಿದ್ದಾರೆ.
ರಾಜಸ್ಥಾನ ರಾಜ್ಯದ ಚುರು ಲೋಕಸಭಾ ಕ್ಷೇತ್ರದಿಂದ ಈ ಬಾರಿ, ಪ್ಯಾರಾ ಒಲಂಪಿಕ್‌ನ ಜಾವಲಿನ್ ಎಸೆತದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂದೇ ಖ್ಯಾತಿಯಾದ, ಶ್ರೀ. ದೇವೇಂದ್ರ ಝಝರಿಯಾ ಅವರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ.
ಪಶ್ಚಿಮ ಬಂಗಾಳದ ಹೂಗ್ಲಿ ಲೋಕಸಭಾ ಕ್ಷೇತ್ರದಿಂದ, ಬಂಗಾಳಿ ಚಲನಚಿತ್ರರಂಗದ ಖ್ಯಾತ ನಟಿಯಾದಂತಹ ಲಾಕೆಟ್ ಚಟರ್ಜಿಯವರು ಸ್ಪರ್ಧಿಸಲಿದ್ದಾರೆ.
ಪಶ್ಚಿಮ ಬಂಗಾಳದ ಮೇದಿನಿಪುರ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷ, ಭಾರತದ ಖ್ಯಾತ ಫ್ಯಾಶನ್ ಡಿಸೈನರ್ ಆದಂತಹ ಶ್ರೀಮತಿ. ಅಗ್ನಿಮಿತ್ರ ಪೌಲ್ ಅವರಿಗೆ ಟಿಕೇಟ್ ನೀಡಿದೆ.