“ಬಿಜೆಪಿ ಸರ್ಕಾರ, ಅತ್ಯಂತ ಭ್ರಷ್ಟ ಸರ್ಕಾರ”- ಎಸ್. ರವಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳ ಕೆಸರಾಟ ಪ್ರಸ್ತುತ ಭಾರಿ ಪ್ರಮಾಣದಲ್ಲಿ ಉಲ್ಬಣವಾಗುತ್ತಿದೆ. ಈ ಬೆಳವಣಿಗೆ ರಾಜ್ಯದ ಅಭಿವೃದ್ಧಿಗೆ ಮುಳ್ಳಾಗಿ ಪರಿಣಮಿಸಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಗುದ್ದಾಟದ ಮಧ್ಯೆ ವಿಧಾನಪರಿಷತ್ ಸದಸ್ಯರಾದ ಎಸ್.ರವಿ ಅವರು ಭಾರತೀಯ ಜನತಾ ಪಕ್ಷದ ಮೇಲೆ ವಾಕ್ ಸಮರ ಕೈಗೊಂಡಿದ್ದಾರೆ.
ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಆಪರೇಷನ್ ಕಮಲ ಎಂಬ ವಾಮಮಾರ್ಗದ ಮೂಲಕ, ರಾಜ್ಯದಲ್ಲಿ ಭ್ರಷ್ಟ ಸರ್ಕಾರಕ್ಕೆ ನಾಂದಿ ಹಾಡಿದವರೇ ಭಾರತೀಯ ಜನತಾ ಪಕ್ಷ ಎಂದು ತೀಕ್ಷ್ಣವಾಗಿ ಆರೋಪಿಸಿದರು. “ಬಿಜೆಪಿ ಸರ್ಕಾರ, ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ” ಎಂದು ರವಿ ಅವರು ಹೇಳಿದ್ದಾರೆ.
ಇದೇ ಹೊತ್ತಿನಲ್ಲಿ ತಮ್ಮ ಪಕ್ಷವಾದ ಕಾಂಗ್ರೆಸ್ ಪರವಾಗಿ ಮಾತನಾಡಿದ ರವಿಯವರು, “ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ನುಡಿದಂತೆ ನಡೆದ ನಮ್ಮ ಸರ್ಕಾರದ ಜನಪ್ರಿಯತೆ ಸಹಿಸದೆ, ಬಿಜೆಪಿ ಪಾದಯಾತ್ರೆ ಮಾಡುತ್ತಿದೆ.” ಎಂದು ಇವತ್ತು ಮೈಸೂರಿನಲ್ಲಿ ಭಾರತೀಯ ಜನತಾ ಪಕ್ಷ ಕೈಗೊಂಡಿರುವ ಪಾದಯಾತ್ರೆಯ ವಿರುದ್ಧವಾಗಿ ಗುಡುಗಿದರು.