ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಸೂತ್ರ ತಪ್ಪಿದ ಗಾಳಿಪಟ.
ಲಕ್ನೋ: 2019ರ ಲೋಕಸಭಾ ಚುನಾವಣೆಯಲ್ಲಿ 60 ಕ್ಕಿಂತ ಹೆಚ್ಚು ಸ್ಥಾನವನ್ನು ಗೆದ್ದು ಬಿಜೆಪಿಯು ಗೆಲುವಿನ ನಗುವನ್ನು ಬೇಡಿತು ಈ ಉತ್ತರ ಪ್ರದೇಶದಲ್ಲಿ. ಇವರು ಸಹ ಅಷ್ಟೇ ಸೀಟುಗಳನ್ನು ಗೆಲ್ಲಲಿದೆ ಎಂಬ ಆತ್ಮವಿಶ್ವಾಸ ಹೊಂದಿದ ಭಾರತೀಯ ಜನತಾ ಪಕ್ಷಕ್ಕೆ ಎಣಿಸದ ಆಘಾತ ಉಂಟಾಗಿದೆ.
ಒಟ್ಟು 80 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಪ್ರದೇಶ ರಾಜ್ಯ, ಯಾವುದೇ ಪಕ್ಷಕ್ಕೂ ಅತ್ಯಂತ ಅವಶ್ಯಕವಾದ ರಾಜ್ಯವಾಗಿದೆ. ಭಾರತೀಯ ಜನತಾ ಪಕ್ಷ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಬಹುಮತಗಳನ್ನು ಪಡೆದು ಅಧಿಕಾರದಲ್ಲಿದೆ. ಆದರೆ ಈ ಬಾರಿ ಉತ್ತರ ಪ್ರದೇಶದಲ್ಲಿ ಅಂದುಕೊಂಡಂತೆ ಬಿಜೆಪಿಗೆ ಮುನ್ನಡೆಗಳು ಸಿಕ್ಕಿಲ್ಲ. ಪ್ರಸ್ತುತ 35 ರಿಂದ 45 ಸೀಟುಗಳನ್ನು ಬಿಜೆಪಿ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಅಖಿಲೇಶ್ ಯಾದವ್ ಅವರ ಚಾಣಾಕ್ಷ ರಾಜಕೀಯ ಯೋಜನೆಗಳು ಸಮಾಜವಾದಿ ಪಕ್ಷವನ್ನು ಈ ಬಾರಿ ಅದ್ಬುತ ಮುನ್ನಡೆಯತ್ತ ಸಾಗುವತ್ತ ಮಾಡಿದೆ. ಕೇಂದ್ರದಲ್ಲಿ ಏಕೈಕ ಬಹುಮತ ಹೊಂದಿದ ಪಕ್ಷ ಎಂಬ ಹಿರಿಮೆಯನ್ನು ಪಡೆಯಬೇಕೆಂಬ ಕನಸು ಹೊಂದಿದ್ದ ಬಿಜೆಪಿಗೆ ಈ ಬಾರಿ ಅಡ್ಡಗೋಡೆಯಾಗಿದ್ದು ಅಖಿಲೇಶ್ ಯಾದವ್ ಎನ್ನಬಹುದು.