ಗೆದ್ದ ಖುಷಿಗೆ ಪಾರ್ಟಿ ನೀಡಿದ ಸಂಸದ ಸುಧಾಕರ್; ಗುಂಡು-ತುಂಡಿಗೆ ಅನುಮತಿ ನೀಡಿದ್ದು ಯಾರು?

ಬೆಂಗಳೂರು: ಚಿಕ್ಕಬಳ್ಳಾಪುರದ ಪ್ರಸ್ತುತ ಭಾರತೀಯ ಜನತಾ ಪಕ್ಷದ ಸಂಸದ ಡಾ.ಕೆ. ಸುಧಾಕರ್ ಅವರು ಇಂದು ನೆಲಮಂಗಲದಲ್ಲಿ, ತಮ್ಮ ಅಭಿಮಾನಿಗಳಿಗೆ ಫುಲ್ ಪಾರ್ಟಿ ನೀಡಿದ್ದಾರೆ. ಉಚಿತ ಎಣ್ಣೆಗೆ ಜೇನಿನ ಹಾಗೆ ತುಂಬಿಕೊಂಡ ಮಧ್ಯ ಪ್ರಿಯರು. ಈ ಪಾರ್ಟಿಯನ್ನು ತಾವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಖುಷಿಗೆ ಸುಧಾಕರ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಈ ರೀತಿ ಬಹಿರಂಗವಾಗಿ ಮಧ್ಯವನ್ನು ಹಂಚಲು ಯಾರಿಂದ ಅನುಮತಿ ಪಡೆದಿದ್ದಾರೆ? ಎಂಬ ಬಗ್ಗೆ ಮಾಧ್ಯಮದವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ವರಿಷ್ಠಾಧಿಕಾರಿಯನ್ನು ಕೇಳಿದಾಗ, “ಅಬಕಾರಿ ಇಲಾಖೆ ಅನುಮತಿ ನೀಡಿದ್ದು, ಬಂದೋಬಸ್ತ್ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ.ಇದರಲ್ಲಿ ಪೊಲೀಸ್ ಇಲಾಖೆಯ ತಪ್ಪಿಲ್ಲ, ಅನುಮತಿ ನೀಡುವ ಜವಾಬ್ದಾರಿ ಅಬಕಾರಿ ಇಲಾಖೆಯ ಮೇಲಿದೆ.” ಎಂದು ಹೇಳಿ ತಪ್ಪು ನಮ್ಮದಲ್ಲ ಎಂದು ಕೈ ತೊಳೆದುಕೊಂಡಿದ್ದಾರೆ.
ಒಂದು ಕಡೆ ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಹೇಳುತ್ತಾ, ಇನ್ನೊಂದೆಡೆ ಮಧ್ಯವನ್ನು ಬಹಿರಂಗವಾಗಿ ಹಂಚುವುದು, ಮಗು ಮತ್ತು ತೊಟ್ಟಿಲಿನ ಗಾದೆಗೆ ಸರಿಯಾಗಿದೆ.