Politics
ಮಾಲ್ಡೀವ್ಸ್ ಅಧ್ಯಕ್ಷರ ಮೇಲೆ ಮಾಟಮಂತ್ರ; ಸಚಿವೆ ಬಂಧನ.
ಮಾಲಿ: ಭಾರತದ ನೆರೆಯ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಮತ್ತೊಮ್ಮೆ ಸುದ್ದಿಗೆ ಬಂದಿದೆ. ಆದರೆ ಇದು ಒಳ್ಳೆಯ ವಿಷಯಕ್ಕೆ ಅಲ್ಲ. ನಮ್ಮ ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲು ಪ್ರಾಣಿ ಬಲಿ ಹರಕೆ, ಮಂತ್ರಿ ಸ್ಥಾನ ಕೈತಪ್ಪಲು ಕೇರಳ ಮಾಟ ಮಂತ್ರಗಳ ಬಗ್ಗೆ ಈಗಾಗಲೇ ಕೇಳಿದ್ದೇವೆ. ಅದೇ ರೀತಿಯ ಮಾಟಮಂತ್ರದ ಸುದ್ದಿ ಮಾಲ್ಡೀವ್ಸ್ ದೇಶದಿಂದ ಕೂಡ ಕೇಳಿ ಬರುತ್ತಿದೆ. ಹಾಗಾದರೆ, ಯಾರು ಯಾರ ಮೇಲೆ ಮಾಡಿದ್ದಾರೆ ಮಾಟ?!
ಆ ದೇಶದ ಪರಿಸರ, ವಾತಾವರಣ ಬದಲಾವಣೆ ಹಾಗೂ ಇಂಧನ ಸಚಿವೆ, ಫಾತಿಮಾ ಶಮ್ನಾಝ್ ಅಲಿ ಸಲೀಮ್, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಜ್ಜು ಮೇಲೆಯೇ ಮಾಟಮಂತ್ರ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಷಯ ಹಾಸ್ಯಾಸ್ಪದ ಆಗಿದ್ದರೂ ಕೂಡ ಮಾಲ್ಡೀವ್ಸ್ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಆ ಸಚಿವೆಯನ್ನು ಬಂಧಿಸಿದ್ದಾರೆ.
ಅಂತೂ ಈ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಿದಾಡುತ್ತಿದೆ. ರಾಷ್ಟದ ಅಧ್ಯಕ್ಷರನ್ನು ಚುನಾವಣೆಯಲ್ಲಿ ಮಾತ್ರವಲ್ಲದೆ, ಈ ರೀತಿಯಾಗಿ ಕೂಡ ಸೋಲಿಸಲು ಮುಂದಾಗುತ್ತಾರೆ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ.