Bookings Open Now: ಬಘೀರ ಚಿತ್ರದ ಟಿಕೆಟ್ ಬುಕ್ಕಿಂಗ್‌ಗೆ ಭರ್ಜರಿ ಆರಂಭ..!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾರಿ ಕುತೂಹಲ ಮೂಡಿಸಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಬಘೀರ ಚಿತ್ರದ ಟಿಕೆಟ್ ಬುಕಿಂಗ್ ಭರ್ಜರಿಯಾಗಿ ಆರಂಭವಾಗಿದೆ. ಅಭಿಮಾನಿಗಳು ಬುಕ್ ಮೈ ಶೋ ಮೂಲಕ ಟಿಕೇಟ್ ಕಾಯ್ದಿರಿಸಬಹುದು. ಅಕ್ಟೋಬರ್ 31ರಂದು ದೀಪಾವಳಿಯ ಶುಭ ಸಂದರ್ಭದಲ್ಲಿ ರಿಲೀಸ್ ಆಗುತ್ತಿರುವ ಭಘೀರ ತನ್ನ ಟ್ರೈಲರ್‌ನಿಂದಲೇ ಬಾರಿ ಸಂಚಲನವನ್ನು ಹುಟ್ಟುಹಾಕಿದೆ.
ಟಿಕೇಟ್ ಬುಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
https://in.bookmyshow.com/bengaluru/movies/bagheera/ET00379650
ಸೂಪರ್ ಹೀರೋ ಆಗಿ ಶ್ರೀಮುರಳಿ:
ಈ ಚಿತ್ರದಲ್ಲಿ ಶ್ರೀಮುರಳಿ ಖಡಕ್ ಪೊಲೀಸ್ ಆಫೀಸರ್ ಆಗಿಯೂ ಹಾಗೂ ಸೂಪರ್ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಈ ಎರಡೂ ಮುಖಗಳು ಒಬ್ಬನೇ ವ್ಯಕ್ತಿಯದ್ದಾ ಅಥವಾ ಇವೆರೆಡೂ ಬೇರೆ ಬೇರೆಯೇ ಎಂಬುದು ಅಭಿಮಾನಿಗಳ ಮುಂದಿರುವ ಪ್ರಶ್ನೆ. ಒಟ್ಟಿನಲ್ಲಿ ಚಿತ್ರದಲ್ಲಿ ಬಘೀರನ ಹುಡುಕಾಟ ಅಭಿಮಾನಿಗಳನ್ನು ಇನ್ನಷ್ಟು ಖುರ್ಚಿಯ ತುದಿಗೆ ತಂದು ಕೂರಿಸಲಿದೆ ಎಂಬ ನಿರೀಕ್ಷೆ ಇದೆ.
ರುಕ್ಮಿಣಿ ವಸಂತ್ ಹಾಗೂ ಸುಧಾರಾಣಿ ಹೈಲೈಟ್:
ಬಘೀರನಿಗೆ ಸಾಥ್ ನೀಡಲು ರುಕ್ಮಿಣಿ ವಸಂತ್ ಹಾಗೂ ಸುಧಾರಾಣಿ ಚಿತ್ರದ ಪ್ರಮುಖ ಭಾಗವಾಗಿ ಇರಲಿದ್ದಾರೆ. ಟ್ರೈಲರ್‌ನ ಪ್ರಾರಂಭದಲ್ಲಿ ಬರುವ ಸುಧಾರಾಣಿಯವರ ಡೈಲಾಗ್ ಚಿತ್ರ ನಿರೀಕ್ಷೆಯ ತೂಕವನ್ನು ಇನ್ನಷ್ಟು ಹೆಚ್ಚಿಸಿದೆ. ಅದೇ ರೀತಿ ರುಕ್ಮಿಣಿ ವಸಂತ್ ಅವರ ಮುಗ್ಧ ಅಭಿನಯ ಅಭಿಮಾನಿಗಳಿಗೆ ಹಿಡಿಸಲಿದೆ.
ಹೊಂಬಾಳೆ ಹೊಸ ಇತಿಹಾಸ:
ಬಘೀರ ಚಿತ್ರವನ್ನು ಕನ್ನಡ ಚಿತ್ರರಂಗದ ಫೇವರೆಟ್ ಆಗಿರುವ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ. ಚಿತ್ರದ ನಿರ್ದೇಶನವನ್ನು ಡಾ. ಸೂರಿ ವಹಿಸಿಕೊಂಡಿದ್ದಾರೆ. ಕಥೆಯನ್ನು ಬರೆದಿರುವುದು ಟಾಪ್ ನಿರ್ದೇಶಕ ಪ್ರಶಾಂತ್ ನೀಲ್, ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತ ಪ್ರೇಕ್ಷಕರಿಗೆ ಪ್ರತಿ ಸೀನ್‌ಗೂ ರೋಮಾಂಚನ ಮಾಡಲಿದೆ.
ಮೂರು ವರ್ಷಗಳ ಶ್ರಮದ ಫಲವಾಗಿ ಈ ಚಿತ್ರ ಇದೇ ಅಕ್ಟೋಬರ್ 31ರಂದು ಬಿಡುಗಡೆ ಹೊಂದಲಿದೆ.