OTTಗೆ ಬರ್ತಿದೆ ಕನ್ನಡದ ಹೊಚ್ಚಹೊಸ ಸೂಪರ್ ಹಿಟ್ ಚಿತ್ರಗಳು: ಹಾಗಾದರೆ ಅವುಗಳು ಯಾವುವು..?!
ಬೆಂಗಳೂರು: ಕನ್ನಡದ ಸಿನಿಮಾ ಪ್ರೇಮಿಗಳಿಗಾಗಿ ಸಂತಸದ ಸುದ್ದಿ! ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಹೃದಯ ಗೆದ್ದ ಹೊಸ ಕನ್ನಡ ಸಿನಿಮಾಗಳು ಈಗ ಡಿಜಿಟಲ್ ವೇದಿಕೆಯಲ್ಲಿ ಹೊಸ ಸಂಭ್ರಮಕ್ಕೆ ತಯಾರಾಗಿವೆ. ನಿಮ್ಮ ನೆಚ್ಚಿನ OTT ವೇದಿಕೆಗಳಲ್ಲಿ ಈ ಚಿತ್ರಗಳನ್ನು, ನಿಮಗೆ ಇಷ್ಟವಾದ ಜಾಗದಲ್ಲಿ ವೀಕ್ಷಿಸಲು ಸಿದ್ಧರಾಗಿ. ಇಲ್ಲಿ ನೀವು ಬಘೀರ, ಮಾರ್ಟಿನ್, ಭೈರತಿ ರಣಗಲ್ ಹಾಗೂ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ OTT ಬಿಡುಗಡೆ ದಿನಾಂಕ ಮತ್ತು ತಾಣಗಳ ಮಾಹಿತಿ ಪಡೆಯಿರಿ.
ಬಘೀರ (Netflix)
ಅಕ್ಟೋಬರ್ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಘೀರ ಇದೀಗ ನವೆಂಬರ್ 21 ರಿಂದ ನೆಟ್ಫ್ಲಿಕ್ಸ್‌ನಲ್ಲಿ ಲಭ್ಯ. ಸೂಪರ್ ಹೀರೋ ಕಥಾನಕದ ಈ ಚಿತ್ರದಲ್ಲಿ ಶ್ರೀಮುರಳಿ, ರುಕ್ಮಿಣಿ ವಸಂತ, ಪ್ರಕಾಶ್ ರಾಜ್, ರಾಮಚಂದ್ರ ರಾಜು ಮತ್ತು ಸುಧಾ ರಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾಜದಲ್ಲಿ ನ್ಯಾಯಕ್ಕಾಗಿ ಹೋರಾಡುವ ನಾಯಕನ ಕಥೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಮಾರ್ಟಿನ್ (Prime Video)
ಧ್ರುವ ಸರ್ಜಾ ನಟನೆಯ ಈ ಚಿತ್ರ ಈಗಾಗಲೇ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಲೇಫ್ಟನಂಟ್ ಬ್ರಿಗೇಡಿಯರ್ ಅರ್ಜುನ್ ಸಕ್ಸೇನಾ ತನ್ನ ಜೀವನದ ಅರ್ಥ ಹುಡುಕಲು ಭಾರತಕ್ಕೆ ಬರುವ ಕಥೆ, ಉಗ್ರ ಚಟುವಟಿಕೆಗಳನ್ನು ಎದುರಿಸುವ ಸಸ್ಪೆನ್ಸ್ ತ್ರಿಲ್ಲರ್ ‘ಮಾರ್ಟಿನ್’ ಚಿತ್ರದ ಪ್ರೇರಣೆ.
ಭೈರತಿ ರಣಗಲ್ (Zee5)
ಶಿವರಾಜ್‌ಕುಮಾರ್ ಅಭಿನಯದ ಈ ಆಕ್ಷನ್-ಕ್ರೈಮ್ ಡ್ರಾಮಾ ನವೆಂಬರ್ 15, 2024 ರಂದು ತೆರೆಗೆ ಬಂದಿತ್ತು. ರಣಗಲ್‌ನ ಕಥೆ ಈಗ ಡಿಸೆಂಬರ್ ಅಂತ್ಯ ಅಥವಾ 2025ರ ಜನವರಿ ಪ್ರಾರಂಭದಲ್ಲಿ ಜೀ5ನಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.
ಇಬ್ಬನಿ ತಬ್ಬಿದ ಇಳೆಯಲಿ (Prime Video)
ಸೆಪ್ಟೆಂಬರ್ 5, 2024 ರಂದು ಬಿಡುಗಡೆಯಾದ ಈ ಪ್ರೇಮಕತೆ ಈಗ ಪ್ರೈಮ್ ವಿಡಿಯೋದಲ್ಲಿ ಲಭ್ಯ. ವಿಹಾನ್ ಗೌಡ ಮತ್ತು ಮಯೂರಿ ನಟರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ, ತೊಂದರೆಗಳನ್ನು ಎದುರಿಸುತ್ತಾ ಪ್ರೀತಿಯ ನಿಜವಾದ ಅರ್ಥ ಹುಡುಕುವ ಕಥೆಯನ್ನು ಹೇಳುತ್ತದೆ.
OTT ಪ್ರೇಕ್ಷಕರಿಗೆ ಸಿಹಿ ಸುದ್ದಿ:
ನೀವು ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ವೀಕ್ಷಿಸಲು ಮಿಸ್ ಮಾಡಿದ್ದರೆ, ಈಗ ನಿಮ್ಮ ಮನೆಯಲ್ಲೇ ನಿಮ್ಮ ನೆಚ್ಚಿನ ಡಿವೈಸ್‌ನಲ್ಲಿ ವೀಕ್ಷಿಸಲು ಅವಕಾಶವಿದೆ. ಹೊಸ ಸಿನಿಮಾಗಳ ಈ ಪಟ್ಟಿ ನಿಮಗೆ ಖುಷಿ ನೀಡುವುದು ಖಾತ್ರಿ!