ಸದ್ಯಕ್ಕೆ ಸಂಪುಟ ಸರ್ಜರಿಗೆ ಬ್ರೇಕ್!

ಕರ್ನಾಟಕ ಉಪಚುನಾವಣೆ ಪಲಿತಾಂಶ ಬಳಿಕ ಸಂಪುಟ ಪುನರ್ ರಚನೆ ಬಗ್ಗೆ ಊಹಾಪೋಹಗಳು ಇದ್ದವು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಇದಕ್ಕಾಗಿ ಕಳೆದ ವಾರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳಿದ್ದರು. ಈ ಕುರಿತಂತೆ , ಇಂದು ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿದ ಸಿದ್ದರಾಮಯ್ಯ “ಸದ್ಯಕ್ಕೆ ಯಾವುದೇ ರೀತಿಯ ಸಂಪುಟ ಪುನರ್ ರಚನೆ ಮಾಡಲ್ಲ, ಖಾಲಿ ಇರುವ ಮಂತ್ರಿ ಸ್ಥಾನವನ್ನು ಭರ್ತಿ ಮಾಡ್ತೀವಿ, ಹೈಕಮಾಂಡ್ ಸೂಚಿಸಬೇಕು, ಬಳಿಕ ನಾನು ನಿರ್ಧರಿಸುತ್ತೇನೆ, ಅವರು ಹೇಳಿಲ್ಲ, ನಾನು ತೀರ್ಮಾನ ತೆಗೆದುಕೊಂಡಿಲ್ಲ” ಎಂದು ಹೇಳಿದರು. ಈ ಮೂಲಕ ಸಂಪುಟ ಪುನರ್‌ರಚನೆಯ ಊಹಾಪೋಹಗಳನ್ನು ತಳ್ಳಿಹಾಕಿದರು. ಇದು ಹಲವು ಸಚಿವ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ. ಕಾಂಗ್ರೇಸ್ ʼಸ್ವಾಭಿಮಾನಿ ಸಮಾವೇಶʼ ಡಿಸೆಂಬರ್ 5 ರಂದು ಆಯೋಜಿಸಲಾಗಿದ್ದು, “ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕರ್ನಾಟಕ ಉಸ್ತುವಾರಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಭಾಗವಹಿಸಲಿದ್ದಾರೆ” ಎಂದು ಹೇಳಿದರು.
ಧನ್ಯಾ ರೆಡ್ಡಿ ಎಸ್
ಆಲ್ಮಾ ಮೀಡಿಯಾ ಸ್ಕೂಲ್‌ವಿದ್ಯಾರ್ಥಿನಿ