Bengaluru

ಬೆಂಗಳೂರಿಗೆ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆ: ಜಲ ಕ್ಷಾಮಕ್ಕೆ ಇದಾಗಲಿದೆಯೇ ವರ..?!

ಬೆಂಗಳೂರು: ನಗರದ 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆ ನಾಳೆ ಪ್ರಾರಂಭಗೊಳ್ಳಲಿದೆ. ಈ ₹4,336 ಕೋಟಿ ವೆಚ್ಚದ ಯೋಜನೆ, ಸುಮಾರು 50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿಯೊಂದಿಗೆ ಆರಂಭಿಸಲಾಗಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯು ಸರ್ಕಾರದ ಬದ್ಧತೆ ಮತ್ತು ಕಾರ್ಯದಕ್ಷತೆಯಿಂದ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಬೆಂಗಳೂರಿನ ಜನತೆಗೆ ನಿರಂತರ ಕುಡಿಯುವ ನೀರು ಒದಗಿಸುವತ್ತ ಪ್ರಮುಖ ಹೆಜ್ಜೆ ಎಂದು ಹೇಳಲಾಗುತ್ತಿದೆ.

ರಾಜ್ಯ ಸರ್ಕಾರ ಮತ್ತು ಸಮುದಾಯದ ಹಿತಾಸಕ್ತಿ ಹೊಂದಿದ ಈ ಯೋಜನೆಯು ನಗರ ಪ್ರದೇಶದ ಕುಡಿಯುವ ನೀರಿನ ಕೊರತೆಯನ್ನು ಪರಿಹರಿಸಲಿದೆ.

Show More

Leave a Reply

Your email address will not be published. Required fields are marked *

Related Articles

Back to top button