CinemaEntertainmentSports

CCL 2025: ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ಗೆ ದಿನಗಣನೆ ಶುರು, ಕರ್ನಾಟಕ ಬುಲ್ಡೋಜರ್ಸ್ ಕಪ್ ಗೆಲ್ಲಲು ರೆಡಿ!

ಬೆಂಗಳೂರು: ಸಿನಿಮಾ ತಾರೆಯರು ಈ ಬಾರಿ ಕಿರುತೆರೆಯ ಬದಲು ಕ್ರಿಕೆಟ್ ಮೈದಾನದಲ್ಲಿ ಫೈಟ್ ನೀಡಲು ಸಜ್ಜಾಗಿದ್ದಾರೆ! ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2025 ಇದರ 11ನೇ ಸೀಸನ್ ಫೆಬ್ರವರಿ 8ರಿಂದ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕನಾಗಿ ಕಿಚ್ಚ ಸುದೀಪ್ ಮುನ್ನಡೆಸಲಿದ್ದಾರೆ. ಈ ಬಾರಿಯ ವಿಶೇಷ ಅಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ!

ಕರ್ನಾಟಕ ಬುಲ್ಡೋಜರ್ಸ್: ಈ ಬಾರಿಯ ಟಾರ್ಗೆಟ್ ಏನು?

ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಕಳೆದ ಬಾರಿ ರನ್ನರ್-ಅಪ್ ಆಗಿ ಹೊರಹೊಮ್ಮಿದರೂ, ಈ ಬಾರಿ ಕಪ್ ಗೆಲ್ಲುವ ಗುರಿಯೊಂದಿಗೆ ಮೈದಾನಕ್ಕಿಳಿಯಲಿದ್ದಾರೆ. 4 ಬಾರಿ ಚಾಂಪಿಯನ್ ಆಗಿರುವ ಈ ತಂಡಕ್ಕೆ ಮಾಲೀಕರಾಗಿ ಅಶೋಕ್ ಖೇಣಿ ಸಾಥ್ ನೀಡುತ್ತಿದ್ದಾರೆ.

ಸುದೀಪ್, ಅಶೋಕ್ ಖೇಣಿ, ಮತ್ತು ಆಯೋಜಕರ ಭರವಸೆ!

ಸಿಸಿಎಲ್ 11ರ ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತನಾಡಿ,
“ಸಿಸಿಎಲ್ ಕೇವಲ ಕ್ರಿಕೆಟ್ ಟೂರ್ನಮೆಂಟ್ ಅಲ್ಲ, ಇದು ವಿಭಿನ್ನ ಭಾಷೆಯ ಚಿತ್ರರಂಗಗಳ ನಡುವಿನ ಸೇತುವೆಯಾಗಿದೆ. ಇದು ನಮಗೆ ಅದ್ಭುತ ಅನುಭವ ನೀಡಿದೆ” ಎಂದರು.

ತಂಡದ ಮಾಲೀಕ ಅಶೋಕ್ ಖೇಣಿ ಈ ಬಾರಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಸಿಸಿಎಲ್ ಆಯೋಜಕರಾದ ವಿಷ್ಣು ಇಂದೋರಿ ಹೇಳಿದ್ದು,
“ಕರ್ನಾಟಕ ಬುಲ್ಡೋಜರ್ಸ್ ನನ್ನ ಹೃದಯಕ್ಕೆ ಹತ್ತಿರ. ಸುದೀಪ್ ಸರ್ ಕೇವಲ ಸ್ಟಾರ್ ಅಲ್ಲ, ನಮ್ಮ ಸಹೋದರನಂತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಸಿಸಿಎಲ್ 11 – ಯಾವೆಲ್ಲಾ ತಂಡಗಳು ಭಾಗವಹಿಸುತ್ತಿವೆ?

ಈ ಬಾರಿ 7 ತಂಡಗಳು ಸಿಸಿಎಲ್‌ನಲ್ಲಿ ತೊಡಗಿಸಿಕೊಳ್ಳಲಿವೆ:

  • ಕರ್ನಾಟಕ ಬುಲ್ಡೋಜರ್ಸ್
  • ಚೆನ್ನೈ ರೈನೋಸ್
  • ಬೆಂಗಾಲ್ ಟೈಗರ್ಸ್
  • ಪಂಜಾಬ್ ಡಿ ಶೇರ್
  • ಮುಂಬೈ ಹೀರೋಸ್
  • ಭೋಜ್‌ಪುರಿ ದಬಾಂಗ್ಸ್
  • ತೆಲುಗು ವಾರಿಯರ್ಸ್

ಕರ್ನಾಟಕ ಬುಲ್ಡೋಜರ್ಸ್ ಆಟಗಾರರ ಪಟ್ಟಿ:

  • ನಾಯಕ: ಕಿಚ್ಚ ಸುದೀಪ್
  • ಗೋಲ್ಡನ್ ಸ್ಟಾರ್ ಗಣೇಶ್
  • ಕಾರ್ತಿಕ್ ಜಯರಾಮ್
  • ಡಾರ್ಲಿಂಗ್ ಕೃಷ್ಣ
  • ಸುನಿಲ್ ರಾವ್
  • ಚಂದನ್ ಕುಮಾರ್
  • ನಿರೂಪ್ ಭಂಡಾರಿ & ಅನೂಪ್ ಭಂಡಾರಿ
  • ರಾಜೀವ್ ಹನು, ಪ್ರತಾಪ್ ನಾರಾಯಣ್
  • ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕಾನಂದ, ತ್ರಿವಿಕ್ರಮ್

CCL 2025 – ಹೊಸ ವೇಳಾಪಟ್ಟಿ

  • ಫೆಬ್ರವರಿ 8: ಕರ್ನಾಟಕ ಬುಲ್ಡೋಜರ್ಸ್ vs ತೆಲುಗು ವಾರಿಯರ್ಸ್ (ಬೆಂಗಳೂರು)
  • ಫೆಬ್ರವರಿ 14: ಚೆನ್ನೈ ರೈನೋಸ್ vs ಕರ್ನಾಟಕ ಬುಲ್ಡೋಜರ್ಸ್ (ಹೈದರಾಬಾದ್)
  • ಫೆಬ್ರವರಿ 15: ಮುಂಬೈ ಹೀರೋಸ್ vs ಕರ್ನಾಟಕ ಬುಲ್ಡೋಜರ್ಸ್ (ಹೈದರಾಬಾದ್)
  • ಫೆಬ್ರವರಿ 22: ಪಂಜಾಬ್ ಡಿ ಶೇರ್ vs ಕರ್ನಾಟಕ ಬುಲ್ಡೋಜರ್ಸ್ (ಸೂರತ್)
  • ಮಾರ್ಚ್ 1: ಸೆಮಿಫೈನಲ್
  • ಮಾರ್ಚ್ 2: ಫೈನಲ್

ಸಿಸಿಎಲ್ 2025: ಯಾರು ಪ್ರಾಯೋಜಕರು?

  • Title Sponsor: Blobs
  • Co-Sponsor: Airtel Payments Bank
  • Associate Sponsor: NICE Limited
  • Equipment Sponsor: SG
  • Analytics Sponsor: St8bat

ಕರ್ನಾಟಕ ಬುಲ್ಡೋಜರ್ಸ್ ಈ ಬಾರಿ ಚಾಂಪಿಯನ್ ಆಗುತ್ತಾರಾ? ಕಿಚ್ಚ ಸುದೀಪ್ ನೇತೃತ್ವದ ತಂಡ ಮತ್ತೊಮ್ಮೆ ಟ್ರೋಫಿ ಎತ್ತಬಹುದಾ? ಉತ್ತರ ತಿಳಿಯಲು ಫೆಬ್ರವರಿ 8ರಂದು ನಡೆಯುವ CCL 2025 ಕ್ಕೆ ಕಾದಿರಿ!

Show More

Related Articles

Leave a Reply

Your email address will not be published. Required fields are marked *

Back to top button