Politics
ಕಾಂಗ್ರೆಸ್‌ನಲ್ಲಿ ‘ಖುರ್ಚಿ ಆಟ’: ಮುಂದಿನ ಮುಖ್ಯಮಂತ್ರಿ ತಯಾರಿ ಜೋರಾಗಿದೆ..?!
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ಆದೇಶ ಹೊರಬಂದ ಕೂಡಲೇ ರಾಜ್ಯ ರಾಜಕೀಯದಲ್ಲಿ ಸಿಎಂ ರಾಜೀನಾಮೆ ಕೂಗು ಭಾರೀ ಬಿಗುವಾಗಿಯೇ ಕೇಳಿಬಂದಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದ ಬಳಿಕ, ಬಿಜೆಪಿ ನಾಯಕರು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಮನೆಯ ಅಂಗಳದಲ್ಲಿ ಖುರ್ಚಿ ಆಟ ಪ್ರಾರಂಭವಾಗಿದೆ ಎಂಬ ಗುಮಾನಿ ಕೂಡ ಹರಿದಾಡುತ್ತಿದೆ.
ಒಂದು ಖುರ್ಚಿ, ಹಲವು ಆಕಾಂಕ್ಷಿಗಳು, ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?
ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ ಶಿವಕುಮಾರ್, ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಆರ್.ವಿ ದೇಶಪಾಂಡೆ ಮುಂತಾದ ಪ್ರಮುಖ ನಾಯಕರು ಸಿಎಂ ಸ್ಥಾನಕ್ಕಾಗಿ ಓಟದಲ್ಲಿ ಇದ್ದಾರೆ ಎನ್ನಲಾಗಿದೆ.
ಬಿಜೆಪಿ ಒತ್ತಾಯವೇನು?
ಬಿಜೆಪಿ ನಾಯಕ ಆರ್. ಅಶೋಕ್, “ಸತ್ಯ ಹರಿಶ್ಚಂದ್ರನ ಬಣ್ಣ ಬಯಲಾಗಿದ್ದು, ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹಾಗೆ, ಕೂಡಲೇ ರಾಜೀನಾಮೆ ಕೊಡಬೇಕು” ಎಂದು ಒತ್ತಾಯಿಸಿದ್ದಾರೆ.