Politics
ನಾಯ್ಡು ಹಾಗೂ ನಿತೀಶ್ ಮೋದಿಗೆ ಸಾಥ್!

ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದಿದೆ. ಭಾರತೀಯ ಜನತಾ ಪಕ್ಷ ಹಾಗೂ ಮಿತ್ರ ಪಕ್ಷಗಳು ಸೇರಿ ಒಟ್ಟು 293 ಸ್ಥಾನಗಳನ್ನು ಗಳಿಸಿದೆ. ಇದರಲ್ಲಿ ಬಿಜೆಪಿಯ ಪಾಲು 240. ಸದ್ಯ ಬಿಜೆಪಿ ಅತ್ಯಂತ ಹೆಚ್ಚು ಸ್ಥಾನ ಗಳಿಸಿರುವ ಪಕ್ಷವಾಗಿ ಹೊರಹೊಮ್ಮಿದೆ.
ಬಹುಮತ ಸಾಧಿಸಲು ಒಟ್ಟು 272 ಸ್ಥಾನಗಳ ಅಗತ್ಯ ಇರುವುದರಿಂದ, ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಮಿತ್ರ ಪಕ್ಷಗಳ ಸಹಕಾರ ಅತ್ಯಗತ್ಯವಾಗಿದೆ. ಹಾಗಾಗಿ ಜೆಡಿಎಸ್ ಪಕ್ಷದ ನಿತೀಶ್ ಕುಮಾರ್, ಹಾಗೂ ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರು ಮೋದಿಯವರ ಮೂರನೇ ಬಾರಿಯ ಸರ್ಕಾರವನ್ನು ರಚಿಸಲು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಈ ಕುರಿತ ಅಗತ್ಯದ ಸಭೆಗಳು ನವದೆಹಲಿಯಲ್ಲಿ ನಡೆಯುತ್ತಿವೆ. ಆಯಾ ಪಕ್ಷಗಳ ಬೇಡಿಕೆಗಳನ್ನು ಈಡೇರಿಸಿ, ಈ ಬಾರಿ ಸರ್ಕಾರ ಕಟ್ಟುವ ಸ್ಥಿತಿಯಲ್ಲಿ ಮೋದಿಯವರು ಇದ್ದಾರೆ.