BengaluruKarnatakaPolitics

ಚನ್ನಪಟ್ಟಣದ ಚಕ್ರವ್ಯೂಹ: ನಿಖಿಲ್ ಕುಮಾರಸ್ವಾಮಿಗೆ ಗೆಲುವು ತರದ ದಳಪತಿಗಳ ದಾಳ..?!

ಚನ್ನಪಟ್ಟಣ: ರಾಜ್ಯ ರಾಜಕೀಯದಲ್ಲಿ ತೀವ್ರವಾದ ಕುತೂಹಲವನ್ನು ಕೆರಳಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಇಂದು ತನ್ನ ಫಲಿತಾಂಶವನ್ನು ಹೊರಬಿಡುತ್ತಿದೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರ ದಾಳ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಯವರಿಗೆ ಗೆಲುವು ತರದೆ ಹೋಯಿತು?

ಈಗಾಗಲೇ ಚುನಾವಣಾ ಫಲಿತಾಂಶ ಹೊರಬರುತ್ತಿದ್ದು ಸರಿಸುಮಾರು 22 ಸಾವಿರ ಮತಗಳ ಅಂತರವನ್ನು ಸಿ.ಪಿ. ಯೋಗೇಶ್ವರ್ ಅವರು ಕಾಯ್ದುಕೊಂಡಿದ್ದಾರೆ. ಈ ಬಾರಿಯೂ ನಿಖಿಲ್ ಕುಮಾರಸ್ವಾಮಿಯವರು ಸೋತರೆ ಸತತ ಮೂರು ಬಾರಿ ಸೋಲು ಕಂಡಂತೆ ಆಗುತ್ತದೆ. ಇದು ಜೆಡಿಎಸ್ ಪಕ್ಷದ ಮುಂದಿನ ಭವಿಷ್ಯದ ಮೇಲೂ ಕೂಡ ಪರಿಣಾಮ ಬೀರಲಿದೆ.

ನಿಖಿಲ್ ಕುಮಾರಸ್ವಾಮಿ ಅವರ ಹಿನ್ನಡೆಗೆ ಕಾರಣವೇನು?

  • ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೋರಿದ ಸಮಯ ವಿಳಂಬ, ಕ್ಷೇತ್ರದ ಜನರಲ್ಲಿ ಈ ಮೈತ್ರಿ ಪಕ್ಷದ ಮೇಲೆ ತಾತ್ಸಾರ ತಂದಿರಬಹುದು.
  • ಪ್ರಜ್ವಲ್ ರೇವಣ್ಣ, ಎಚ್. ಡಿ. ರೇವಣ್ಣ ಹಾಗೂ ಸೂರಜ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೂಡ ಮತದಾರರ ಆಯ್ಕೆ ಮೇಲೆ ಪರಿಣಾಮ ಬೀರಿರಬಹುದು.
  • ಬಿಜೆಪಿ ಸಿ.ಪಿ.ಯೋಗೀಶ್ವರ್ ಅವರನ್ನು ನಡೆಸಿಕೊಂಡ ರೀತಿ, ಅಂತಿಮ ಕ್ಷಣದಲ್ಲಿ ಟಿಕೆಟ್ ನಿರಾಕರಣೆ, ಈ ಅಂಶಗಳು ಕೂಡ ಚುನಾವಣೆಯಲ್ಲಿ ತನ್ನ ಪ್ರಭಾವ ಬೀರಿರಬಹುದು.
  • ಇದರೊಂದಿಗೆ ಡಿಕೆ ಬ್ರದರ್ಸ್ ಅವರ ಚಾಣಾಕ್ಷತೆಯೊಂದಿಗೆ, ಸರ್ಕಾರದ ಐದು ಗ್ಯಾರಂಟಿಗಳು ಕೂಡ ತಮ್ಮ ಕೆಲಸ ಮಾಡಿವೆ ಎನ್ನಲಾಗಿದೆ.

ಅಂತೂ ನಿಖಿಲ್ ಕುಮಾರಸ್ವಾಮಿ ಅವರು ಮತ್ತೊಮ್ಮೆ ಚುನಾವಣೆಯಲ್ಲಿ ಚಕ್ರವ್ಯೂಹದಲ್ಲಿ ಸಿಕ್ಕ ಅಭಿಮನ್ಯುನಂತೆ ಸೋಲನ್ನು ಅನುಭವಿಸಲು ತಯಾರಾಗಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button