ಚೆಸ್ ಕ್ಷೇತ್ರದ ಧ್ರುವ ತಾರೆ ಗುಕೇಶ್..!

ಕೆಲವೊಂದಿಷ್ಟು ಜನರು 18 ವರ್ಷ ಆದರೂ ಇನ್ನು ಮಕ್ಕಳ ರೀತಿ ವರ್ತಿಸುತ್ತಾರೆ ಇನ್ನು ಮಕ್ಕಳ ಬುದ್ಧಿಯೆ ಹೋಗಿರುವುದಿಲ್ಲ. ಅಂತರದಲ್ಲಿ 18 ವರ್ಷಕ್ಕೆ ಇಲ್ಲೊಬ್ಬ ಚಾಂಪಿಯನ್ ಆಗಿದ್ದ ಹೌದು ನಾನು ಹೇಳೋದಕ್ಕೆ ಹೊರಟಿರೋದು ಭಾರತದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಆದಂತಹ ಗುಕೇಶ್ ದೊಮ್ಮರಾಜು ಬಗ್ಗೆ, 18 ವರ್ಷಕ್ಕೆ ಈತ ಭಾರತೀಯ ಚೆಸ್ ಗ್ರಾಂಡ್ ಮಾಸ್ಟರ್ ಅಂದರೆ ನಂಬಲೇಬೇಕು. ಗುಕೇಶ್ ಮೂಲತಃ ಚೆನ್ನೈ ನವರು 29 ಮೇ 2016ರಲ್ಲಿ ಜನಿಸ್ತಾರೆ. ಚೆನ್ನೈನ ಮೇಲ್ಅಯನಂಬಾಕ್ಕಂ ವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸವನ್ನ ಮಾಡಿದ್ರು, ಕುಕೇಶ್‌ಗೆ ವಿದ್ಯಾಭ್ಯಾಸಕ್ಕಿಂತ ಚೆಸ್ಸನಲ್ಲೆ ಹೆಚ್ಚಿನ ಆಸಕ್ತಿ ಇತ್ತು. ಹಾಗಾಗಿ ಅವರ ಪೋಷಕರು ಸಹ ಅವರಿಗೆ ಬೆಂಬಲವನ್ನ ನೀಡುತ್ತಾ ಬಂದರು.
ಗುಕೇಶ್ ದೊಮ್ಮರಾಜು ಒಬ್ಬ ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ ಮತ್ತು ಪ್ರಸ್ತುತ ವಿಶ್ವ ಚೆಸ್ ಚಾಂಪಿಯನ್. ಚೆಸ್ ಪ್ರಾಡಿಜಿ ಎಂದು ಪರಿಗಣಿಸಲಾದ ಗುಕೇಶ್, ಡಿಸೆಂಬರ್ 2024 ರಲ್ಲಿ ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿ, ಫೆಡರೇಷನ್ ಇಂಟರ್ನ್ಯಾಷನೇಲ್ ಡೆಸ್ ಎಚೆಕ್ಸ್ (FIDE; ಅಂತರರಾಷ್ಟ್ರೀಯ ಚೆಸ್ ಫೆಡರೇಶನ್) ವಿಶ್ವ ಚೆಸ್ ಚಾಂಪಿಯನ್‌ಶಿಪ್ ಅನ್ನು 7.5 ರಿಂದ 6.5 ಅಂಕಗಳ ಅಂತರದಿಂದ ಗೆದ್ದು ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಪಟ್ಟವನ್ನ ಮುಡಿಗೇರಿಸಿಕೊಂಡರು. ಅವರು 12 ವರ್ಷ ಇರುವಾಗಲೇ ಗ್ರ್ಯಾಂಡ್‌ಮಾಸ್ಟರ್ ಆದರು. ಗುಕೇಶ್ ಅವರ ಮುಂಚೆ ಉಕ್ರೇನ್‌ನ ಸೆರ್ಗೆ ಕರ್ಜಾಕಿನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಅಭಿಮನ್ಯು ಮಿಶ್ರಾ ಮಾತ್ರ ಕಿರಿಯ ವಯಸ್ಸಿನಲ್ಲಿ ಆಟಗಾಗರಾಗಿರುತ್ತಾರೆ.ಈ ರೆಕೊರ್ಡನ್ನ ಗುಕೇಶ್ ಮುರಿದು ಅತ್ಯಂತ ಕಿರೀಯ ಆಟಗಾರ ಎನಿಸಿಕೊಳ್ಳುತ್ತಾರೆ. ಜನವರಿ 2024 ರಲ್ಲಿ ಅವರು ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನಪ್ರಶಸ್ತಿಗೆ ಭಾಜನರಾಗುತ್ತಾರೆ. ಬೇರೆ ಬೇರೆ ವಿಭಾಗಗಳಲ್ಲಿ ಬೇರೆ ಬೇರೆ ವಯೋಮಿತಿಯಲ್ಲಿ ಚಾಂಪಿಯನ್ ಆಗ್ತಾನೆ ಹೊಗ್ತಾರೆ.

2015ರಲ್ಲಿ ಏಷ್ಯನ್ ಸ್ಕೂಲ್ ಚಾಂಪಿಯನ್‌ಶಿಪ್‌ಗಳಲ್ಲಿ 9 ವರ್ಷದೊಳಗಿನವರ ವಿಭಾಗದಲ್ಲಿ ಭಾಗವಹಿಸಿ ಪಂದ್ಯವನ್ನ ಗೆದ್ದು ನಂತರ ಅಭ್ಯರ್ಥಿ ಮಾಸ್ಟರ್ ಸ್ಥಾನವನ್ನು ಪಡೆದುಕೊಂಡಿದ್ರು. ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 12 ವರ್ಷದೊಳಗಿನವರ ವಯಕ್ತಿಕ ಬ್ಲಿಟ್ಜ, ಕ್ಲಾಸಿಕಲ್ ಸೇರಿ ಒಟ್ಟು ಐದು ಚಿನ್ನದ ಪದಕವನ್ನ ಗೆದ್ದಿದ್ರು. 2017ರಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ ಅನ್ನುವಂತ ಪಟ್ಟವನ್ನು ತಮ್ಮ 12ನೇ ವಯಸ್ಸಿನಲ್ಲೆ ಗುಕೇಶ್ ಗಿಟ್ಟಿಸಿಕೊಳ್ತಾರೆ. ಗ್ರ್ಯಾಂಡ್‌ಮಾಸ್ಟರ್ ಆದ ನಂತರ ಗುಕೇಶ್ ಉತ್ತಮ ಪ್ರದರ್ಶನ ನೀಡುತ್ತಲೇ ಇದ್ದರು. ಫೆಬ್ರವರಿ 2020 ರಲ್ಲಿ ಡೆನ್ಮಾರ್ಕ್‌ನ ಹಿಲ್ಲೆರೋಡ್ ಚೆಸ್ ಕ್ಲಬ್ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ 9 ಅಂಕಗಳಲ್ಲಿ 8 ಅಂಕಗಳನ್ನು ಗಳಿಸುವ ಮೂಲಕ ಮತ್ತು ಒಂದು ವಾರದ ನಂತರ ಕೇನ್ಸ್ ಚೆಸ್ ಉತ್ಸವದಲ್ಲಿ ಒಟ್ಟು 9 ಅಂಕಗಳಲ್ಲಿ 7.5 ಅಂಕಗಳನ್ನು ಗಳಿಸುವ ಮೂಲಕ ಅವರು ಗೆದಿದ್ರು.
ಅಕ್ಟೋಬರ್ 2022 ರಲ್ಲಿ, ಐಮ್ಚೆಸ್ ರಾಪಿಡ್ ಆನ್‌ಲೈನ್ ಟೂರ್ನಮೆಂಟ್‌ನಲ್ಲಿ, ಗುಕೇಶ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದರು , ಕಾರ್ಲ್ಸನ್ ವಿಶ್ವ ಚಾಂಪಿಯನ್ ಆದ ನಂತರ ಅಧಿಕೃತ ಪಂದ್ಯದಲ್ಲಿ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರ ಇವರಾಗಿದ್ರು. ಆಗಸ್ಟ್ 2023 ರಲ್ಲಿ ಗುಕೇಶ್ 2750 ರೇಟಿಂಗ್ಅನ್ನು ಮೀರಿದ ಅತ್ಯಂತ ಕಿರಿಯ ಆಟಗಾರರಾದರು, ಈ ಹಿಂದೆ ಕಾರ್ಲ್ಸನ್ ಹೊಂದಿದ್ದ ದಾಖಲೆಯನ್ನು ಮುರಿದರು. ಗುಕೇಶ್ ಆಗಸ್ಟ್ 2023 ರ FIDE ಚೆಸ್ ವಿಶ್ವಕಪ್‌ನಲ್ಲಿ ಭಾಗವಹಿಸಿದರು, ಕಾರ್ಲ್ಸನ್ ವಿರುದ್ಧ ಸೋಲುವ ಮೊದಲು ಕ್ವಾರ್ಟರ್ ಫೈನಲ್ ತಲುಪಿದರು. ಭಾರತದ ಮೊದಲ GM ಮತ್ತು ಮಾಜಿ ವಿಶ್ವ ಚಾಂಪಿಯನ್ ಆಗಿದ್ದಂತಹ ವಿಶ್ವನಾಥನ್ ಆನಂದ್ ಅವರ 37 ವರ್ಷಗಳ ಆ ಸ್ಥಾನವನ್ನು ಮುರಿದರು ಗುಕೇಶ್ ದಾಖಲೆಯನ್ನ ಸೃಷ್ಟಿಸಿದ್ರು.
ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ನಲ್ಲಿ ಕಿರಿಯ ಆಟಗಾರ ಎಂದು ಪರಿಗಣಿಸಲಾದ ಗುಕೇಶ್, ಫಿರೌಜ್ಜಾ ವಿರುದ್ಧದ ಸೋಲಿನಿಂದ ಚೇತರಿಸಿಕೊಂಡು ಐದು ಪಂದ್ಯಗಳನ್ನು ಗೆದ್ದು ಅಂತಿಮ ಸುತ್ತಿನ ಮೊದಲು ಅರ್ಧ-ಪಾಯಿಂಟ್ ಮುನ್ನಡೆ ಸಾಧಿಸಿದರು. ಸಂಪೂರ್ಣ ಗೆಲುವಿಗೆ ಗುಕೇಶ್‌ಗೆ ನಕಮುರಾ ವಿರುದ್ಧದ ಅಂತಿಮ ಸುತ್ತಿನಲ್ಲಿ ಗೆಲುವು ಅಗತ್ಯವಾಗಿತ್ತು; ನೆಪೋಮ್ನಿಯಾಚಿ ಅಥವಾ ಕರುವಾನಾ ಅವರು ಪರಸ್ಪರ ಎದುರಿಸುತ್ತಿದ್ದ ತಮ್ಮ ಕೊನೆಯ ಪಂದ್ಯವನ್ನು ಗೆದ್ದಿದ್ದರೆ ಡ್ರಾ ಪ್ಲೇಆಫ್‌ಗೆ ಕಾರಣವಾಗುತ್ತಿತ್ತು. ಆದಾಗ್ಯೂ, ಗುಕೇಶ್-ನಕಮುರಾ ಮತ್ತು ಕರುವಾನಾ-ನೆಪೋಮ್ನಿಯಾಚಿ ಪಂದ್ಯಗಳು ಎರಡೂ ಡ್ರಾ ದಲ್ಲಿ ಮುಕ್ತಾಯವಾಗಿ, ಗುಕೇಶ್‌ಗೆ ಗೆಲುವು ತಂದುಕೊಟ್ಟವು. ಅವರು 17 ವರ್ಷ 10 ತಿಂಗಳು 24 ದಿನಗಳ ವಯಸ್ಸಿನಲ್ಲಿ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆದ್ದ ಅತ್ಯಂತ ಕಿರಿಯ ಆಟಗಾರರಾದರು. 1983-84ರಲ್ಲಿ ಪ್ರಶಸ್ತಿಯನ್ನು ಪಡೆದಾಗ ಕೇವಲ 21 ವರ್ಷ ವಯಸ್ಸಿನವರಾಗಿದ್ದ ಚೆಸ್ ದಂತಕಥೆ ಗ್ಯಾರಿ ಕಾಸ್ಪರೋವ್ ಅವರ ಸುಮಾರು 40 ವರ್ಷಗಳ ದಾಖಲೆಯನ್ನು ಅವರು ಮುರಿದರು.
2024 ನವೆಂಬರ 25ರಿಂದ ಡಿಸೆಂಬರ್ ವರೆಗೆ ಸಿಂಗಾಪುರದಲ್ಲಿ ಗುಕೇಶ್ ಜೊತೆ ಚೀನಾದ ಚೇಸ್ ಚಾಂಪಿಯನ್ ಆದಂತಹ ಡಿಂಗ್ ಲೆರೆನ್ ವಿಶ್ವಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ್ರು. ಅಲ್ಲಿ ಒಟ್ಟು 14 ಪಂದ್ಯಗಳಿದ್ದವು. ಆ ಪಂದ್ಯಗಳಲ್ಲಿ ಸೋತು, ಗೆದ್ದು, ಸಮಬಲ ಸಾಧಿಸಿ ಗುಕೇಶ್ ಕೊನೆಯದಾಗಿ ಗೆದ್ದು ಗೆಲುವಿನ ಖುರ್ಚಿಯನ್ನ ಏರಿ 18ನೇ ವಯಸ್ಸಿಗೆ ವಿಶ್ವ ಚಾಂಪಿಯನ್ನ ಆಗಿ ಗುಕೇಶ್ ಪ್ರಪಂಚದಾದ್ಯಂತ ಭಾರತದ ಹಿರಿಮೆಯನ್ನ ಎತ್ತಿ ಹಿಡಿದಿದ್ರು.
ಗುಕೇಶ್ ವಿಶ್ವಚಾಂಪಿಯನ್ ಆದ ಬಳಿಕ ಭಾರತದ ಮಿತ್ರ ರಾಷ್ಟ್ರವಾದ ರಷ್ಯಾ ಇದು mach fixing ಆಗಿದೆ.ಡಿಂಗ್ ಲೆರಿನ್ ಬೇಕಂತಲೇ ಸೋತಿದ್ದಾರೆ. ಎಂದು ಆರೋಪವನ್ನ ಮಾಡಿ ತನಿಖೆಗೂ ಆಗ್ರಹಿಸಿತ್ತು. ಆದರೆ ಅಂತರಾಷ್ಟ್ರೀಯ ಚೆಸ್ ಫೆಡರೇಶ್‌ನ್ ಈ ಆರೋಪವನ್ನ ತಳ್ಳಿ ಹಾಕಿದೆ. ಇದೆಲ್ಲ ಒಂದು ಕಡೆ ಆದರೆ 18ನೇ ವಯಸ್ಸಿಗೇ ಕೋಟಿಯ ಒಡೆಯನಾಗಿ, ವಿಶ್ವ ಚೆಸ್ ಚಾಂಪಿಯನ್ ಪಡೆದಂತಹ ಗುಕೇಶ್ ದೊಮ್ಮರಾಜು ಅವರ ಸಾಧನೆ ಶ್ಲಾಘನೀಯ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ