BengaluruHealth & Wellness
ಬೆಂಗಳೂರು ಪಿಜಿಗಳಲ್ಲಿ ಕಾಲರಾ ಭೀತಿ.

ಬೆಂಗಳೂರು: ನೀರಿನ ಅಭಾವವನ್ನು ಎದುರಿಸುತ್ತಿರುವ ಮಹಾನಗರ ಬೆಂಗಳೂರಿಗೆ ಈಗ ಇನ್ನೊಂದು ಸಮಸ್ಯೆ ಎದುರಾಗಿದೆ. ಬೆಂಗಳೂರಿನ ಪಿಜಿಗಳಲ್ಲಿ ಕಾಲರಾ ಮಹಾಮಾರಿ ತಲೆಯೆತ್ತಿದೆ. ಇದು ಹೊರ ಊರಿನಿಂದ ಬೆಂಗಳೂರಿನಲ್ಲಿ ಜೀವನ ಹುಡುಕಿ ಬಂದಂತಹ ಅನೇಕ ಯುವಕ ಯುವತಿಯರಿಗೆ ಭಯ ಹುಟ್ಟಿಸಿದೆ.
ಕೆಲವು ಕಾಲರಾ ಕೇಸುಗಳು ದಾಖಲಾದ ಬೆನ್ನಲ್ಲಿಯೇ, ಬೆಂಗಳೂರಿನ ಪಿಜಿ ಮಾಲಿಕರ ಸಂಘ ಎಚ್ಚೆತ್ತುಕೊಂಡಿದೆ. ಅದೇ ರೀತಿ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಅವುಗಳೆಂದರೆ, ಹೊರಗಿನ ಆಹಾರ ನಿಷೇಧ, ಕಡ್ಡಾಯ ಆರ್‌ಒ ವಾಟರ್ ಪ್ಯೂರಿಫೈಯರ್‌ಗಳ ಅಳವಡಿಕೆ, ಮತ್ತು ಅಡುಗೆಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡುವುದು.
ಕೆಲವು ದಿನಗಳ ಹಿಂದೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಬಾಲಕಿಯ ಹಾಸ್ಟೆಲಿನ ಒಟ್ಟು 47 ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಅವರೆಲ್ಲರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು, ಈ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕಾಲದ ಸೋಂಕು ಇರುವುದು ದೃಢಪಟ್ಟಿದೆ.