ರಾಜ್ಯದಲ್ಲಿ ಪೆಟ್ರೋಲ್ ಕಾವು. ಸಿದ್ದರಾಮಯ್ಯನವರ ಪ್ರತಿಕ್ರಿಯೆ ಏನು?

ಬೆಂಗಳೂರು: ರಾಜ್ಯ ಸರ್ಕಾರ 3 ರೂಪಾಯಿ ಸೇಲ್ಸ್ ತೆರಿಗೆಯನ್ನು ಹೇರುವ ಮೂಲಕ ರಾಜ್ಯದಲ್ಲಿ ಪೆಟ್ರೋಲ್ ದರವನ್ನು ಹೆಚ್ಚಿಸಿದೆ. ಇದರ ವಿರುದ್ಧವಾಗಿ ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದೆ. ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯವನ್ನು ದಿವಾಳಿಯತ್ತ ಕರೆದುಕೊಂಡು ಹೋಗುತ್ತಿದೆ ಕಾಂಗ್ರೆಸ್ ಸರ್ಕಾರ ಎಂದು ದೂಷಿಸುತ್ತಿದೆ.
ಇದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ನಾವು ಪೆಟ್ರೋಲ್ ಮತ್ತು ಡೀಸೆಲ್ ಎರಡರ ಮೇಲೆಯೂ 3 ರೂಪಾಯಿಯಷ್ಟು ಮಾರಾಟ ತೆರಿಗೆಯನ್ನು ಹೆಚ್ಚಿಸಿದ್ದೇವೆ. ಆದರೂ, ನಮ್ಮ ನೆರೆಯ ರಾಜ್ಯಗಳ ದರಕ್ಕಿಂತ ನಾವು ಕಡಿಮೆ ಇದ್ದೇವೆ, ಬಿಜೆಪಿಯವರು ರಾಜಕೀಯ ಕಾರಣಗಳಿಗಾಗಿ ಇದನ್ನು ಸಮಸ್ಯೆ ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರು ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿದಾಗ ಪೆಟ್ರೋಲ್ ಮತ್ತು ಡೀಸೆಲ್ ಬಗ್ಗೆ ಅವರು 10 ಕ್ಕೂ ಹೆಚ್ಚು ಬಾರಿ ಮೌನ ವಹಿಸಿದ್ದಾರೆ, ಅವರು ಅದನ್ನು ಹೆಚ್ಚಿಸಿದ್ದಾರೆ… ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲನ್ನು, 14 ನೇ ಹಣಕಾಸು ಆಯೋಗದಿಂದ 15 ನೇ ಹಣಕಾಸು ಆಯೋಗದವರೆಗೆ, ನಾವು ಸುಮಾರು 1,87,00,000 ಕೋಟಿ ರೂ ಕಳೆದುಕೊಂಡಿದ್ದೇವೆ. ಈ ಜನರು ಅದರ ಬಗ್ಗೆ ಏಕೆ ಮೌನವಾಗಿದ್ದಾರೆ?… ಅಭಿವೃದ್ಧಿ ಕಾರ್ಯಗಳಿಗಾಗಿ, ನಾವು ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದೇವೆ.” ಎಂದು ಹೇಳಿದರು.
ಭಾರತೀಯ ಜನತಾ ಪಕ್ಷ ಈ ಮೊದಲು ಕಾಂಗ್ರೆಸ್ ಮೋದಿ ಸರ್ಕಾರ ಪೆಟ್ರೋಲ್ ದರವನ್ನು ಹೆಚ್ಚಿಸಿದ ಸಂದರ್ಭದಲ್ಲಿ ಮಾಡಿದ ಪ್ರತಿಭಟನೆ, ನೀಡಿದ ಹೇಳಿಕೆಗಳನ್ನು ವ್ಯಂಗ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ತಿರುಗಿ ಹೇಳುತ್ತಿದ್ದಾರೆ.