Bengaluru

ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ: ಪಂಚಮಸಾಲಿ ಲಿಂಗಾಯತ ಮೀಸಲಾತಿಗೆ ಸಿಕ್ಕಿತೇ ಒಪ್ಪಿಗೆ..?!

ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯದ 2ಎ ಮೀಸಲಾತಿ ಬೇಡಿಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆಯನ್ನು ನೀಡಿದ್ದು, ಪ್ರಕರಣವನ್ನು ಕಾನೂನು ಪ್ರಕಾರ ಮತ್ತು ಸಂವಿಧಾನದ ಆಶಯದಂತೆ ನಿರ್ಣಯಿಸಲಾಗುವುದೆಂದು ಹೇಳಿದರು.

ಸಮುದಾಯದ ಮುಖಂಡರಾದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗದೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಮೀಸಲಾತಿ ಕುರಿತಂತೆ ನಮ್ಮ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಸಾಮಾಜಿಕ ನ್ಯಾಯ ನಮ್ಮ ನಿಲುವಾಗಿದೆ. ಎಲ್ಲ ದುರ್ಬಲ ವರ್ಗದವರಿಗೆ ನ್ಯಾಯ ದೊರೆಯಬೇಕು,” ಎಂದು ಹೇಳಿದರು.

ನ್ಯಾಯಾಲಯದ ತಿರ್ಮಾನವೇ ಅಂತಿಮ ತಿರ್ಮಾನ..?!

ಹಿಂದಿನ ಸರ್ಕಾರದ ಸಮಯದಲ್ಲಿ 2ಸಿ ಮತ್ತು 2ಡಿ ಪ್ರವರ್ಗಗಳನ್ನು ಸೃಷ್ಟಿಸಿ, 3ಎ ಮತ್ತು 3ಬಿಯಲ್ಲಿದ್ದ ಸಮುದಾಯಗಳನ್ನು ಹೊಸ ಪ್ರವರ್ಗಗಳಿಗೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಇದನ್ನು ಮುಸ್ಲಿಂ ಸಮುದಾಯ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವುದರಿಂದ, ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ತೀರ್ಮಾನಗೊಳ್ಳಬೇಕಿದೆ.

“ನೀತಿಸಂಹಿತೆ ಕಾರಣಕ್ಕೆ ತಕ್ಷಣದ ತೀರ್ಮಾನ ಸಾಧ್ಯವಿಲ್ಲ”: ಸಿಎಂ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಈ ಸಂದರ್ಭದಲ್ಲಿ ತಕ್ಷಣದ ತೀರ್ಮಾನವನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. “ಮೀಸಲಾತಿಯ ಕುರಿತು ನಿರ್ಧಾರವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಮಾತ್ರ ಕೈಗೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಸಮುದಾಯದ ಬೇಡಿಕೆಗಳು: 2ಎ ಪ್ರವರ್ಗಕ್ಕೆ ಸೇರಲು ಒಪ್ಪಲಿದೆಯೇ ಸರ್ಕಾರ..?!

ಪಂಚಮಸಾಲಿ ಲಿಂಗಾಯತ ಸಮುದಾಯವು ಪ್ರಸ್ತುತ 3ಬಿ ಪ್ರವರ್ಗದಡಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದು, 2ಎ ಮೀಸಲಾತಿಯಡಿಗೆ ಸೇರಿಸಬೇಕೆಂದು ನಿಯೋಗ ಒತ್ತಾಯಿಸಿದೆ. ಸಮುದಾಯದ ಬಹುತೇಕ ಭಾಗ ಕೃಷಿ ಕಾರ್ಮಿಕರಾಗಿದ್ದು, ಉನ್ನತ ಶಿಕ್ಷಣದ ಅವಕಾಶಗಳಿಂದ ವಂಚಿತರಾಗಿದ್ದಾರೆ.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು, “ನಾವು ಕಾನೂನು ಪ್ರಕಾರ ಯಾವುದೇ ತೀರ್ಮಾನ ಕೈಗೊಳ್ಳುವಾಗ, ಅದು ನ್ಯಾಯಾಲಯದ ದೃಷ್ಟಿಕೋನದಲ್ಲಿಯೂ ನ್ಯಾಯಯುತವಾಗಿರಬೇಕು,” ಎಂದು ಹೇಳಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button